ಗೋಪಾಲ್ಕಲಾ

– ಸವಿತಾ.

gopalkala, ಗೋಪಾಲ್ಕಲಾ

ಬೇಕಾಗುವ ಸಾಮಾನುಗಳು

  • ಅವಲಕ್ಕಿ – 3 ಬಟ್ಟಲು
  • ಚುರುಮುರಿ (ಮಂಡಕ್ಕಿ) – 1 ಬಟ್ಟಲು
  • ಮೊಸರು – 2 ಬಟ್ಟಲು
  • ಸೌತೆಕಾಯಿ – 1
  • ದಾಳಿಂಬೆ ಹಣ್ಣು – 1
  • ಹಸಿ ಕೊಬ್ಬರಿ ತುರಿ – 1/2 ತೆಂಗಿನಕಾಯಿ
  • ಹಸಿ ಮೆಣಸಿನಕಾಯಿ – 4
  • ತುಪ್ಪ – 4 ಚಮಚ
  • ಸಾಸಿವೆ 1/4 ಚಮಚ
  • ಜೀರಿಗೆ – 1/4 ಚಮಚ
  • ಇಂಗು 1/4 ಚಮಚ
  • ಸಕ್ಕರೆ 1 ಚಮಚ
  • ಹಸಿ ಶುಂಟಿ 1/4 ಇಂಚು
  • ಉಪ್ಪು – ರುಚಿಗೆ ತಕ್ಕಶ್ಟು
  • ಕೊತ್ತಂಬರಿ ಸೊಪ್ಪು – ಸ್ವಲ್ಪ

ಮಾಡುವ ಬಗೆ

ಅವಲಕ್ಕಿ ತೊಳೆದುಕೊಂಡು, ಮೀಡಿಯಂ ಅಳತೆಯ ಒಂದು ಸೌತೆಕಾಯಿ ತುರಿದು ಸೇರಿಸಿ. ಇದಕ್ಕೆ ತುರಿದ ಹಸಿ ಕೊಬ್ಬರಿ, ಬಿಡಿಸಿದ ದಾಳಿಂಬೆ ಹಣ್ಣಿನ ಬೀಜ ಸೇರಿಸಿ ಇಟ್ಟುಕೊಳ್ಳಿ. ಹಸಿ ಶುಂಟಿ ಮತ್ತು ಹಸಿ ಮೆಣಸಿನಕಾಯಿ ಕತ್ತರಿಸಿಟ್ಟುಕೊಳ್ಳಿ.

ತುಪ್ಪ ಬಿಸಿ ಮಾಡಿಕೊಂಡು, ಸಾಸಿವೆ, ಜೀರಿಗೆ, ಇಂಗು, ಹಸಿ ಶುಂಟಿ ಮತ್ತು ಹಸಿ ಮೆಣಸಿನಕಾಯಿ ಹಾಕಿ ಒಗ್ಗರಣೆ ಹಾಕಿಕೊಳ್ಳಿ. ರುಚಿಗೆ ತಕ್ಕಶ್ಟು ಉಪ್ಪು, 1 ಚಮಚ ಸಕ್ಕರೆ ಸೇರಿಸಿ, ಒಲೆ ಆರಿಸಿ. ಸ್ವಲ್ಪ ತಣ್ಣಗಾದ ಬಳಿಕ ಒಗ್ಗರಣೆಗೆ ಕಲಸಿಟ್ಟುಕೊಂಡ ಅವಲಕ್ಕಿ ಮಿಶ್ರಣ, ಮೊಸರು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಚುರುಮುರಿ ಅತವಾ ಮಂಡಕ್ಕಿ ಸೇರಿಸಿ, ಸ್ವಲ್ಪ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ ಇನ್ನೊಮ್ಮೆ ಚೆನ್ನಾಗಿ ಕಲಸಿ.

ಈಗ ಗೋಪಾಲ್ಕಲಾ ಸವಿಯಲು ಸಿದ್ದ. ಇದನ್ನು ಹೆಚ್ಚಾಗಿ ವ್ರತ-ಉಪವಾಸ ಇದ್ದಾಗ ಮಾಡುತ್ತಾರೆ .

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications