ಈರುಳ್ಳಿ ವಡೆ

– ಸವಿತಾ.

 

ಈರುಳ್ಳಿ ವಡೆ, onion vade

ಬೇಕಾಗುವ ಸಾಮಾನುಗಳು

  • ಅಕ್ಕಿ – 2 ಬಟ್ಟಲು
  • ಕೊಬ್ಬರಿ ತುರಿ – 1 ಬಟ್ಟಲು
  • ಹಸಿ ಮೆಣಸಿನಕಾಯಿ – 4
  • ಹಸಿ ಶುಂಟಿ – 1/4 ಇಂಚು
  • ಕರಿಬೇವು ಎಲೆ – 20
  • ಈರುಳ್ಳಿ – 2
  • ಜೀರಿಗೆ – 1/4 ಚಮಚ
  • ಎಣ್ಣೆ – ಕರಿಯಲು
  • ಉಪ್ಪು – ರುಚಿಗೆ ತಕ್ಕಶ್ಟು

ಮಾಡುವ ಬಗೆ

ಅಕ್ಕಿ ನಾಲ್ಕು ಗಂಟೆ ನೆನೆಯಲು ಇಡಬೇಕು. ಹಸಿ ಕೊಬ್ಬರಿ ತುರಿದು ಇಟ್ಟುಕೊಳ್ಳಿ. ಮಿಕ್ಸರ್ ನಲ್ಲಿ ಅಕ್ಕಿ ಮತ್ತು ತುರಿದ ಕೊಬ್ಬರಿ, ಹಸಿ ಶುಂಟಿ, ಹಸಿ ಮೆಣಸಿನಕಾಯಿ, ಕರಿಬೇವು ಎಲೆ, ಜೀರಿಗೆ ಮತ್ತು ಒಂದು ಕತ್ತರಿಸಿದ ಈರುಳ್ಳಿ ಹಾಕಿ ತರಿ ತರಿಯಾಗಿ ರುಬ್ಬಿ ಇಟ್ಟುಕೊಳ್ಳಿ.

ಸಣ್ಣಗೆ ಕತ್ತರಿಸಿದ ಒಂದು ಈರುಳ್ಳಿ, ರುಚಿಗೆ ತಕ್ಕಶ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ ವಡೆ ಹಾಗೇ ತಟ್ಟಿ ಕಾದ ಎಣ್ಣೆ ಯಲ್ಲಿ ಬಿಟ್ಟು ಕರಿದು ತೆಗೆಯಿರಿ . ಈಗ ಬಿಸಿ ಬಿಸಿ ಈರುಳ್ಳಿ ವಡೆ ಸವಿದು ನೋಡಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks