ಸೇಬು ರಬಡಿ

– ಸವಿತಾ.

apple, rabadi, sebu, ಸೇಬು ರಬಡಿ

ಬೇಕಾಗುವ ಸಾಮಾನುಗಳು

ಹಾಲು – 1/2 ಲೀಟರ್
ಸೇಬು ಹಣ್ಣು – 2
ಗೋಡಂಬಿ – 15
ಬಾದಾಮಿ – 15
ಕೇಸರಿ ದಳ – 4
ಏಲಕ್ಕಿ – 2
ಸಕ್ಕರೆ – 3 ಚಮಚ

ಮಾಡುವ ಬಗೆ

ಹಾಲು ಕಾಯಿಸಿ ಅರ‍್ದ ಆಗುವ ವರೆಗೂ ಕುದಿಸಿ. ಹಾಲು ಉಕ್ಕದಂತೆ ಆಗಾಗ ಚಮಚ ಹಾಕಿ ತಿರುಗಿಸುತ್ತಿರಿ. ಸಣ್ಣ ಉರಿ ಇಟ್ಟು ಸೇಬು ಹಣ್ಣಿನ ಸಿಪ್ಪೆ ತೆಗೆದು ಸಣ್ಣ ಸಣ್ಣ ಹೋಳು ಮಾಡಿ ಹಾಕಿ ಚೆನ್ನಾಗಿ ಕುದಿಸಿ. ಕೇಸರಿ ದಳ ಸೇರಿಸಿ. ಮಿಶ್ರಣ ಗಟ್ಟಿ ಆಗುವಾಗ ಸಕ್ಕರೆ ಸೇರಿಸಿ. ಬಾದಾಮಿ ಗೋಡಂಬಿ ಕುಟ್ಟಿ ಪುಡಿ ಮಾಡಿ ಹಾಕಿ. ಏಲಕ್ಕಿ ಪುಡಿ ಮಾಡಿ ಹಾಕಿ ಚೆನ್ನಾಗಿ ಕಲಸಿ ಒಲೆ ಆರಿಸಿ.

ಸೇಬು ಹಣ್ಣಿನ ರಬಡಿ ಸವಿಯಲು ಸಿದ್ದ. ಬಿಸಿಯಾಗಿ ಅತವಾ ಪ್ರಿಡ್ಜ್ ನಲ್ಲಿ ಇಟ್ಟು ತಂಪಾಗಿಸಿ ಕೂಡ ಸವಿಯಬಹುದು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: