ಕವಿತೆ : ಇರಬಾರದೆ ಗೆಳತಿ ಸುಮ್ಮನಿರಬಾರದೆ…

ವಿನು ರವಿ.

ಒಲವು, ಪ್ರೀತಿ, Love

ಇರಬಾರದೆ ಗೆಳತಿ
ಸುಮ್ಮನಿರಬಾರದೆ
ಕಾಡದೆ ಕೆಣಕದೆ
ಇರಬಾರದೆ ಗೆಳತಿ
ಸುಮ್ಮನಿರಬಾರದೆ

ಸನಿಹದಲಿ ನೀ ಕುಳಿತು
ಮ್ರುದುವಾಗಿ ಬೆರಳುಗಳ ನುಲಿದು
ಮದುರ ಮಾತುಗಳ ನುಡಿದು
ಕವಿತೆಯೊಂದ ಕಟ್ಟಿ ಹಾಡುತಾ
ಕಾಡುತಿರುವೆ ಏಕೆ ಗೆಳತಿ
ಇರಬಾರದೆ ಸುಮ್ಮನಿರಬಾರದೆ

ಹೂಬನದಲಿ ಹೂವಾಗಿ
ತೊರೆಯ ದಡದಲಿ ಹಸಿರಾಗಿ
ಆಗಸದ ನೀಲ ಬಣ್ಣವಾಗಿ
ಕರಗಿ ಹೋಗುವಾ ಆಸೆ ಎಂದು
ಬಯಕೆಯಾ ನುಡಿಯದೇ
ಇರಬಾರದೆ ಸುಮ್ಮನಿರಬಾರದೆ

ಬೇಸರದ ಚಿಟ್ಟೆಯ ಹಾರಿಸಿ
ಪ್ರೀತಿಯ ನಗುವ ತುಳುಕಿಸಿ
ಉಲ್ಲಾಸದ ಹೂ ಬಿಸಿಲಲಿ
ಸುಂದರ ಕ್ಶಣಗಳ ಕಟ್ಟಿ ಹಿಡಿಯುವಾ
ಎಂದು ರಮಿಸಿ ಕೇಳದೆ
ಇರಬಾರದೆ ಗೆಳತಿ
ಸುಮ್ಮನಿರಬಾರದೆ

( ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: