ಮರಣಿಸಿದ ಕವಿತೆ

– ಬರತ್ ರಾಜ್. ಕೆ. ಪೆರ‍್ಡೂರು.

ಕವಿತೆ, ಬೆಂಕಿ, ಸಾವು, poem, burning, fire, riot

ನನ್ನ ಕವನದ ಹೆಣದ ಮುಂದೆ
ಅಳುವವರೆಶ್ಟು ಜನ
ನಗುವವರೆಶ್ಟು ಜನ

ಕವನದ ಮರೋಣತ್ತರಕ್ಕೆ
ಕಾದವರೆಶ್ಟೂ ಜನ
ಮರೋಣತ್ತರ ಪರೀಕ್ಶೆಗಿಳಿದವರೆಶ್ಟೋ ಜನ

ಹುಟ್ಟಿದ ಕಾರಣ ತಿಳಿಯದವರು ಇವರು
ಅನೈತಿಕ ಅನ್ನುವವನ ನೈತಿಕತೆಗಶ್ಟೂ…

ಸಿದ್ದಾಂತ ಹುಡುಕುವವನಿಗೆ ಗೊತ್ತಿಲ್ಲ
ಅವನಿಗೂ ಸಿದ್ದವಿದೆ ಅಂತ್ಯವೆಂಬುದು

ಮರಣಿಸಿದೆ ನನ್ನ ಕವಿತೆ ಅಂತ್ಯವಿಲ್ಲದ
ಸಿದ್ದಾಂತವರಿಯದ ಮಂದಗಾಮಿಗಳ
ಅಟ್ಟಹಾಸ ಮೆರೆಯುವ
ವಿವಾದದ ಬೆಂಕಿಯಲ್ಲಿ ಸುಟ್ಟು

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks