ಕವಿತೆ: ದೀಪ

– ಶ್ಯಾಮಲಶ್ರೀ.ಕೆ.ಎಸ್.

ನೀನಿರುವೆಡೆ ದೈವಕಳೆ
ನೀನಿಲ್ಲದಿದ್ದೆಡೆ ಅಂದಕಾರದ ಕೊಳೆ

ಮಣ್ಣಿನ ಬಟ್ಟಲಲ್ಲೂ ಮಿರುಗುವೆ
ಬೆಳ್ಳಿಯ ಬಟ್ಟಲಲ್ಲೂ ಮಿನುಗುವೆ

ನೀ ಹೊಳೆಯುತಿರೆ ಹೊನ್ನಿನ ರೂಪ
ನೀ ಮುನಿದರೆ ಬೆಂಕಿಯ ಕೂಪ

ಹಬ್ಬಗಳಲ್ಲೂ ನಿನ್ನದೇ ಮೆರುಗು
ಹೊಮ್ಮುವುದು ಆನಂದದ ಸೊಬಗು

ಬೆಳಗಿದೆ ಮನೆ ಮನೆಯಲ್ಲೂ ದೀಪ
ತೊಳೆಯುತಾ ಮನಕೆ ಅಂಟಿದ ಪಾಪ

ಸೂರ‍್ಯ ಚಂದಿರರೂ ನಾಚುವರು
ನೋಡುತ ನಿನ್ನಯ ಸೊಡರು

ನೀ ಮಂಗಳ ಕಾರ‍್ಯದ ಸ್ವರೂಪ
ದೈವಸನ್ನಿದಿಯಲ್ಲಿದ್ದರೆ ನೀ ಬತ್ತದ ನಂದಾದೀಪ

(ಚಿತ್ರ ಸೆಲೆ: hdnicewallpapers.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: