ಕವಿತೆ : ನೀ ಏಕೆ ಹೀಗೆ ಮಾನವಾ

– ವಿನು ರವಿ.

ಪ್ರಶ್ನೆ, Question

ವೇಗವಾಗಿ ಓಡುವ
ಜಿಂಕೆಯು ಯಾವ
ಓಟದ ಸ್ಪರ‍್ದೆಯಲ್ಲು
ಬಾಗವಹಿಸುತ್ತಿಲ್ಲ

ದಿನವೂ ಚೆಲುವಾಗಿ
ಅರಳೊ ಹೂವು
ಯಾರ ಹೊಗಳಿಕೆಯನ್ನು
ಬಯಸುತ್ತಿಲ್ಲ

ಮದುರವಾಗಿ ಹಾಡೊ
ಕೋಗಿಲೆಗೆ ಯಾವ
ಬಿರುದೂ ಬೇಕಿಲ್ಲ

ಸಾವಿರ ಜೀವಿಗಳ
ಹೊತ್ತ ಬೂಮಿಯು
ಯಾವ ಆಸ್ತಿಯನ್ನು ಮಾಡಿಲ್ಲ

ನೂರಾರು ನದಿಗಳ
ತನ್ನೊಡಲಲಿ ಹಿಡಿದ
ಸಾಗರಕೆ ಯಾವ
ಜಂಬವೂ ಇಲ್ಲ

ಬಾವನೆಗಳ ಬಲದಿಂದಲೇ
ಬದುಕೊ ಮಾನವಾ
ನೀನೇಕೆ ಕಲಿತೆ ಇದೆಲ್ಲವಾ

( ಚಿತ್ರ ಸೆಲೆ: clipartpanda.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: