ಎಲೆಕೋಸು ಪಕೋಡಾ

– ಸವಿತಾ.

ಎಲೆಕೋಸು ಪಕೋಡಾ, elekosu pakoda

ಬೇಕಾಗುವ ಸಾಮಾನುಗಳು

  • ಎಲೆಕೋಸು – 1/4 ಬಾಗ
  • ಕಡಲೇ ಹಿಟ್ಟು – 1 ಬಟ್ಟಲು
  • ಅಕ್ಕಿ ಹಿಟ್ಟು – 2 ಚಮಚ
  • ಹಸಿ ಶುಂಟಿ – 1/4 ಇಂಚು
  • ಹಸಿ ಮೆಣಸಿನಕಾಯಿ – 3
  • ಚಕ್ಕೆ – 1/4 ಇಂಚು
  • ಜೀರಿಗೆ – 1/2 ಚಮಚ
  • ಓಂ ಕಾಳು ಅತವಾ ಅಜೀವಾಯಿನ್ – 1/4 ಚಮಚ
  • ಕಾದ ಎಣ್ಣೆ – 1 ಚಮಚ
  • ಗರಮ್ ಮಸಾಲೆ ಪುಡಿ – 1 ಚಮಚ
  • ಅಡುಗೆ ಸೋಡಾ – 1 ಚಿಟಿಕೆ
  • ಸ್ವಲ್ಪ ಕೊತ್ತಂಬರಿ ಸೊಪ್ಪು
  • ಕರಿಯಲು ಎಣ್ಣೆ
  • ಉಪ್ಪು ರುಚಿಗೆ ತಕ್ಕಶ್ಟು

ಮಾಡುವ ಬಗೆ

ಒಂದು ಪಾತ್ರೆಗೆ ಕಡಲೇ ಹಿಟ್ಟು ಮತ್ತು ಅಕ್ಕಿ ಹಿಟ್ಟು ಹಾಕಿ, ಎಲೆಕೋಸು ತೊಳೆದು ಸಣ್ಣಗೆ ಕತ್ತರಿಸಿ ಇದಕ್ಕೆ ಸೇರಿಸಿ. ಹಸಿ ಮೆಣಸಿನಕಾಯಿ, ಜೀರಿಗೆ, ಉಪ್ಪು ಮತ್ತು ಹಸಿ ಶುಂಟಿ ಪೇಸ್ಟ್ ಮಾಡಿ ಹಾಕಿ. ಓಂ ಕಾಳು ಮತ್ತು ಸ್ವಲ್ಪ ಚಕ್ಕೆ ಅರೆದು ಪುಡಿ ಮಾಡಿ ಹಾಕಿ. ಕಾದ ಎಣ್ಣೆ ಸೇರಿಸಿ, ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ಅಡುಗೆ ಸೋಡಾ ಹಾಕಿ ಚೆನ್ನಾಗಿ ಕಲಸಿ. ನಂತರ ಕಾದ ಎಣ್ಣೆಯಲ್ಲಿ ಪಕೋಡಾ ಕರಿದು ತೆಗೆಯಿರಿ. ಈಗ ಎಲೆಕೋಸು ಪಕೋಡಾ ಸವಿಯಲು ಸಿದ್ದ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: