ಗಜ್ಜರಿ ಚಟ್ನಿ

– ಸವಿತಾ.

ಬೇಕಾಗುವ ಸಾಮಾನುಗಳು

  • ಗಜ್ಜರಿ – 2
  • ಕೊತ್ತಂಬರಿ ಸೊಪ್ಪು – 1 ಬಟ್ಟಲು
  • ನಿಂಬೆ ರಸ – 1/2 ಹೋಳು
  • ಬೆಲ್ಲದ ಪುಡಿ – 1 ಚಮಚ
  • ಉದ್ದಿನ ಬೇಳೆ – 1/2 ಚಮಚ
  • ಕಡಲೇ ಬೇಳೆ – 1/2 ಚಮಚ
  • ಇಂಗು – 1/4 ಚಮಚ
  • ಸಾಸಿವೆ – 1/2 ಚಮಚ
  • ಜೀರಿಗೆ – 1/2 ಚಮಚ
  • ಎಣ್ಣೆ – 3 ಚಮಚ
  • ಕರಿಬೇವು – 6 ಎಲೆ
  • ಒಣ ಮೆಣಸಿನಕಾಯಿ – 2
  • ಅರಿಶಿಣ ಪುಡಿ ಸ್ವಲ್ಪ
  • ಉಪ್ಪು ರುಚಿಗೆ ತಕ್ಕಶ್ಟು

ಮಾಡುವ ಬಗೆ

ಬಾಣಲೆಯನ್ನು ಒಲೆಯ ಮೇಲಿಟ್ಟು ಒಂದು ಚಮಚ ಎಣ್ಣೆ ಹಾಕಿ. ಉದ್ದಿನ ಬೇಳೆ, ಕಡಲೇ ಬೇಳೆ, ಒಣ ಮೆಣಸಿನ ಕಾಯಿ ಮತ್ತು ಜೀರಿಗೆಯನ್ನು ಹುರಿದು ತೆಗೆದಿಡಿ. ನಂತರ ಇನ್ನೊಂದು ಚಮಚ ಎಣ್ಣೆ ಹಾಕಿ ಗಜ್ಜರಿ ತುರಿ, ಕರಿಬೇವು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಹುರಿದು ತೆಗೆದಿಡಿ. ಉಪ್ಪು, ನಿಂಬೆ ರಸ ಮತ್ತು ಬೆಲ್ಲ ಸೇರಿಸಿ ಮಿಕ್ಸರ್ ನಲ್ಲಿ ರುಬ್ಬಿ ತೆಗೆಯಿರಿ. ಮತ್ತೆ ಒಂದು ಚಮಚ ಎಣ್ಣೆ ಹಾಕಿ ಬಿಸಿ ಮಾಡಿ. ಸಾಸಿವೆ, ಇಂಗು ಮತ್ತು ಅರಿಶಿಣ ಪುಡಿ ಹಾಕಿ ನಂತರ ರುಬ್ಬಿದ ಮಿಶ್ರಣವನ್ನು ಸೇರಿಸಿ ಸ್ವಲ್ಪ ಕುದಿಸಿ ಕೈಯಾಡಿಸಿ. ಒಲೆ ಆರಿಸಿ, ಈಗ ಗಜ್ಜರಿ ಪಚಡಿ ಅತವಾ ಚಟ್ನಿ ಸವಿಯಲು ಸಿದ್ದ. ಅನ್ನದ ಜೊತೆ ಸವಿಯಿರಿ. ಇದನ್ನು ಸಂಕ್ರಾಂತಿ ಹಬ್ಬ ಮತ್ತು ವ್ರತ ಇದ್ದಾಗಲೂ ನೈವೇದ್ಯವಾಗಿ ಮಾಡುವುದು ರೂಡಿಯಲ್ಲಿದೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: