ಕವಿತೆ: ಬಾವನೆಗಳಿಗೆ ಬೆಲೆಯಿಲ್ಲ

– ವಿನು ರವಿ.

ಬಾವನೆಗಳಿಗೆ ಬೆಲೆಯಿಲ್ಲ ಗೆಳೆಯಾ
ಬಾವನೆಗಳಿಗೆ ಬೆಲೆಯಿಲ್ಲ

ಬಂದು ಹೋಗುವ ಬಂದುವಿನಂತೆ
ಬಾವ ಬಿಂದುಗಳು ನಿಲ್ಲುವುದಿಲ್ಲ ಗೆಳೆಯಾ
ಬಾವನೆಗಳು ನಿಲ್ಲುವುದಿಲ್ಲ ಜೀವನದಿಯಲ್ಲಿ

ಹರಿದು ಹೋಗುವ ಸಂಬಂದಗಳ
ಜೊತೆಗೆ ಬಾವ ರಮ್ಯತೆ
ಉಳಿಯುವುದಿಲ್ಲ ಗೆಳೆಯಾ
ಬಾವ ಸಿಂದು ಸೇರುವುದಿಲ್ಲ

ಏಳು ಬೀಳುಗಳ ಬವಣೆಯಲಿ
ಸಿಲುಕಿದ ಮನಸಿನೊಳಗೆ
ಮ್ರುದುವಾಗಿ ಸ್ಪಂದಿಸುವ
ಹ್ರುದಯಗಳಿಲ್ಲ ಗೆಳೆಯಾ
ಸ್ಪಂದಿಸುವ ಹ್ರುದಯಗಳಿಲ್ಲ

ನಡೆವ ಹಾದಿಯ ಹೊರಳುಗಳ
ನಡುವೆ ನಿಂತು ಕೇಳುವ
ಕವಿತೆಗಳಿಲ್ಲ ಗೆಳೆಯಾ
ಕವಿ ಮನಸುಗಳಿಲ್ಲ

ಬಾವನೆಗಳಿಗೆ ಬೆಲೆಯಿಲ್ಲ ಗೆಳೆಯಾ
ಬಾವನೆಗಳಿಗೆ ಬೆಲೆಯಿಲ್ಲ

( ಚಿತ್ರ ಸೆಲೆ: thebestshayaricollection.blogspot.in)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: