ಆಲೂಗಡ್ಡೆ ಮೊಸರು ಪಚಡಿ

– ಸವಿತಾ.

ಬೇಕಾಗುವ ಸಾಮಾನುಗಳು

  • ಆಲೂಗಡ್ಡೆ – 1
  • ಈರುಳ್ಳಿ – 1
  • ಟೊಮೋಟೊ – 1
  • ಒಣ ಮೆಣಸಿನಕಾಯಿ – 3
  • ಗಜ್ಜರಿ ತುರಿ – 4 ಚಮಚ
  • ಜೀರಿಗೆ – 1/4 ಚಮಚ
  • ಸಾಸಿವೆ – 1/4 ಚಮಚ
  • ಸಕ್ಕರೆ – 1 ಚಮಚ
  • ತುಪ್ಪ – 3 ಚಮಚ
  • ಸವತೇಕಾಯಿ ತುರಿ – 4 ಚಮಚ
  • ಗರಮ್ ಮಸಾಲೆ ಪುಡಿ – 1/4 ಚಮಚ
  • ಮೊಸರು – 2 ಬಟ್ಟಲು
  • ಇಂಗು – ಒಂದು ಚಿಟಿಕೆ
  • ಅರಿಶಿಣ ಪುಡಿ – ಸ್ವಲ್ಪ
  • ಕರಿಬೇವು – ಸ್ವಲ್ಪ
  • ಕೊತ್ತಂಬರಿ ಸೊಪ್ಪು – ಸ್ವಲ್ಪ
  • ಉಪ್ಪು – ರುಚಿಗೆ ತಕ್ಕಶ್ಟು

ಮಾಡುವ ಬಗೆ

ಆಲೂಗಡ್ಡೆಯನ್ನು ಕುದಿಸಿ ಇಳಿಸಿ, ನಂತರ ಸಿಪ್ಪೆ ತೆಗೆದು ಕಿವುಚಿ ಪಾತ್ರೆಗೆ ಹಾಕಿ. ಈರುಳ್ಳಿ ಮತ್ತು ಟೊಮೋಟೊ ಸಣ್ಣಗೆ ಕತ್ತರಿಸಿ ಕಿವುಚಿಟ್ಟುಕೊಂಡ ಆಲೂಗಡ್ಡೆ ಸೇರಿಸಿ. ಸ್ವಲ್ಪ ಗಜ್ಜರಿ ಮತ್ತು ಸವತೆಕಾಯಿ ತುರಿ ಸೇರಿಸಿ. ಗಜ್ಜರಿ, ಸವತೇಕಾಯಿ ಇದ್ದರೇ ಹಾಕಿ, ಇಲ್ಲದಿದ್ದರೂ ನಡೆಯುತ್ತದೆ. ಇದಕ್ಕೆ ಮೊಸರು ಮತ್ತು ಸಕ್ಕರೆ ಸೇರಿಸಿ ಕಲಸಿ ಇಟ್ಟುಕೊಳ್ಳಿ. ಬಾಣಲೆಯನ್ನು ಒಲೆಯ ಮೇಲಿಟ್ಟು ತುಪ್ಪ ಹಾಕಿ ಬಿಸಿ ಮಾಡಿ. ಸಾಸಿವೆ, ಜೀರಿಗೆ, ಇಂಗು, ಕರಿಬೇವು ಮತ್ತು ಮುರಿದ ಒಣ ಮೆಣಸಿನಕಾಯಿ ಹಾಕಿ ಒಗ್ಗರಣೆ ಮಾಡಿ. ಉಪ್ಪು ಮತ್ತು ಅರಿಶಿಣ ಪುಡಿ ಹಾಕಿ ಹುರಿಯಿರಿ. ಗರಮ್ ಮಸಾಲೆ ಪುಡಿ ಸೇರಿಸಿ ಒಲೆ ಆರಿಸಿ. ಈ ಒಗ್ಗರಣೆಯನ್ನು ಆಲೂಗಡ್ಡೆ ಮತ್ತು ಮೊಸರು ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಕಲಸಿ. ಸ್ವಲ್ಪ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ. ಈಗ ಆಲೂಗಡ್ಡೆ ಮೊಸರು ಪಚಡಿ ಸವಿಯಲು ಸಿದ್ದ. ಅನ್ನ, ಚಪಾತಿ ಅತವಾ ಪೂರಿ ಜೊತೆ ಸೈಡ್ ಡಿಶ್ ಆಗಿ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: