ಬಾಳೆಹಣ್ಣಿನ ಕಾರ‍್ನ್ ಪ್ಲೋರ್ ಹಲ್ವಾ

– ಸವಿತಾ.

ಬೇಕಾಗುವ ಸಾಮಾನುಗಳು

  • ಕಾರ‍್ನ್ ಪ್ಲೋರ್ (ಮೆಕ್ಕೆ ಜೋಳದ ಹಿಟ್ಟು) – 2 ಚಮಚ
  • ಬಾಳೆಹಣ್ಣು – 2
  • ಏಲಕ್ಕಿ – 1
  • ಹಾಲು – 2 ಲೋಟ
  • ಪನ್ನೀರ್ – 1 ಲೋಟ
  • ಸಕ್ಕರೆ – 8 ಚಮಚ
  • ಸೋಂಪು ಕಾಳು – 1/2 ಚಮಚ
  • ತುಪ್ಪ – 4 ಚಮಚ
  • ಚಕ್ಕೆ – ಚಿಕ್ಕ ತುಂಡು

ಮಾಡುವ ಬಗೆ

ಹಾಲು ಕಾಯಿಸಿ ಅದಕ್ಕೆ ಕಾರ‍್ನ್ ಪ್ಲೋರ್ ಸೇರಿಸಿ, ಮೂರು ಚಮಚ ತುಪ್ಪ ಹಾಕಿ. ಸಣ್ಣಗೆ ಕತ್ತರಿಸಿದ ಬಾಳೆಹಣ್ಣು ಮತ್ತು ತುರಿದ ಪನ್ನೀರನ್ನು ಸೇರಿಸಿ. ಸಕ್ಕರೆ ಸೇರಿಸಿ ಚೆನ್ನಾಗಿ ತಿರುಗಿಸಿ. ಸಣ್ಣ ಉರಿಯಲ್ಲಿ ಇಟ್ಟು ತಿರುಗಿಸಿ, ಗಟ್ಟಿ ಆಗುತ್ತಿದ್ದಂತೆ ಒಲೆ ಆರಿಸಿ. ಒಂದು ಚಮಚ ಸಕ್ಕರೆ ಸೇರಿಸಿ ಏಲಕ್ಕಿ ಬಿಡಿಸಿ ಕಾಳನ್ನು ಮಾತ್ರ ಹಾಕಿ. ಇದಕ್ಕೆ ಕುಟ್ಟಿ ಪುಡಿ ಮಾಡಿದ ಸೋಂಪು ಕಾಳು ಮತ್ತು ಚಕ್ಕೆ ಸೇರಿಸಿ ಚೆನ್ನಾಗಿ ತಿರುಗಿಸಿ. ಒಂದು ತಟ್ಟೆಗೆ ಸ್ವಲ್ಪ ತುಪ್ಪ ಸವರಿ, ನಂತರ ಈ ಮಿಶ್ರಣ ಹರಡಿ ಆರಲು ಬಿಡಿ. ಆಮೇಲೆ ಬೇಕಾದ ಆಕಾರದಲ್ಲಿ ಕತ್ತರಿಸಿ ಇಟ್ಟುಕೊಳ್ಳಿ. ಈಗ ಬಾಳೆಹಣ್ಣಿನ ಕಾರ‍್ನ್ ಪ್ಲೋರ್ ಹಲ್ವಾ ಸವಿಯಲು ಸಿದ್ದ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: