ಟೊಮೋಟೊ ತಿಳಿಸಾರು

– ಸವಿತಾ.

ಬೇಕಾಗುವ ಸಾಮಾನುಗಳು

  • ಟೊಮೋಟೊ – 4
  • ಒಣ ಮೆಣಸಿನಕಾಯಿ – 3-4
  • ಹಸಿ ಕೊಬ್ಬರಿ ತುರಿ – 1/4 ಬಟ್ಟಲು
  • ಈರುಳ್ಳಿ – 1
  • ಹಸಿ ಶುಂಟಿ – 1/4 ಇಂಚು
  • ಬೆಳ್ಳುಳ್ಳಿ ಎಸಳು – 4
  • ಕರಿಬೇವು ಎಲೆ – 5-6
  • ಕೊತ್ತಂಬರಿ ಸೊಪ್ಪು – ಸ್ವಲ್ಪ
  • ಸಾಸಿವೆ – 1/2 ಚಮಚ
  • ಜೀರಿಗೆ – 1/2 ಚಮಚ
  • ಕರಿ ಮೆಣಸಿನ ಕಾಳು – 1/4 ಚಮಚ
  • ಇಂಗು – 1/4 ಚಮಚ
  • ತೊಗರಿ ಬೇಳೆ – 1/2 ಚಮಚ
  • ಕಡಲೇ ಬೇಳೆ – 1/2 ಚಮಚ
  • ಹುಣಸೇ ರಸ – 1 ಚಮಚ
  • ಬೆಲ್ಲ – 1 ಚಮಚ
  • ಎಣ್ಣೆ – 4 ಚಮಚ
  • ಅರಿಶಿಣ ಪುಡಿ – ಸ್ವಲ್ಪ
  • ಉಪ್ಪು – ರುಚಿಗೆ ತಕ್ಕಶ್ಟು

ಮಾಡುವ ಬಗೆ

ರಸಮ್/ತಿಳಿಸಾರು ಪುಡಿ ಮಾಡುವ ಬಗೆ:

ಬಾಂಡಲಿಯಲ್ಲಿ ಒಂದು ಚಮಚ ಎಣ್ಣೆ ಹಾಕಿ ಬಿಸಿ ಮಾಡಿ ಅದರಲ್ಲಿ ಒಣ ಮೆಣಸಿನಕಾಯಿ ಹುರಿದು ತೆಗೆದಿಟ್ಟುಕೊಳ್ಳಬೇಕು. ಆಮೇಲೆ ತೊಗರಿ ಬೇಳೆ, ಕಡಲೇ ಬೇಳೆ, ಜೀರಿಗೆ, ಇಂಗು ಕರಿಬೇವು, ಕರಿ ಮೆಣಸಿನ ಕಾಳು ಹುರಿದು ತೆಗೆದಿಟ್ಟುಕೊಳ್ಳಬೇಕು. ಇವೆಲ್ಲವನ್ನೂ ಕುಟ್ಟಿ ಪುಡಿ ಮಾಡಿ ರಸಮ್ ಪುಡಿ ಮಾಡಿಕೊಳ್ಳಿ.

ಬಾಣಲೆಯಲ್ಲಿ ಕತ್ತರಿಸಿದ ಈರುಳ್ಳಿ ಹಾಕಿ, ಹುರಿದು ತೆಗೆದಿಟ್ಟುಕೊಳ್ಳಬೇಕು. ಟೊಮೋಟೊ ಕುದಿಸಿ ಇಳಿಸಿ. ಕೊಬ್ಬರಿ ತುರಿ, ಹುರಿದ ಈರುಳ್ಳಿ ಸೇರಿಸಿ ಚೆನ್ನಾಗಿ ಮಿಕ್ಸರ‍್ನಲ್ಲಿ ರುಬ್ಬಿಟ್ಟುಕೊಳ್ಳಬೇಕು. ಆಮೇಲೆ ಹಸಿ ಶುಂಟಿ ಬೆಳ್ಳುಳ್ಳಿ ಪೇಸ್ಟ್ ಮಾಡಿಟ್ಟುಕೊಳ್ಳಬೇಕು. ಬಾಣಲೆಗೆ ಎಣ್ಣೆ ಹಾಕಿ ಒಲೆಯ ಮೇಲಿಟ್ಟು ಒಗ್ಗರಣೆಗೆ ಸಾಸಿವೆ ಜೀರಿಗೆ ಇಂಗು ಕರಿಬೇವು ಹಾಕಿ ಚೆನ್ನಾಗಿ ಕೈಯಾಡಿಸಬೇಕು. ನಂತರ ಹಸಿ ಶುಂಟಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹುರಿಯಬೇಕು. ರುಬ್ಬಿದ ಟೊಮೋಟೊ, ಕೊಬ್ಬರಿ ಮತ್ತು ಈರುಳ್ಳಿ ಮಿಶ್ರಣ ಹಾಕಿ ಚೆನ್ನಾಗಿ ಹುರಿಯಬೇಕು. ನಂತರ ಒಂದು ಲೋಟ ನೀರು ಹಾಕಿ ಒಂದು ಕುದಿ ಕುದಿಸಬೇಕು. ಉಪ್ಪು, ಅರಿಶಿಣ ಪುಡಿ, ರಸಂ ಪುಡಿ, ಹುಣಸೇ ಹಣ್ಣಿನ ರಸ, ಬೆಲ್ಲ ಹಾಕಿ ಕುದಿಸಿ ಇಳಿಸಿಕೊಳ್ಳಬೇಕು. ಈಗ ಟೊಮೋಟೊ ತಿಳಿಸಾರು ಸವಿಯಲು ಸಿದ್ದ, ಅನ್ನದ ಜೊತೆ ಸವಿಯಬಹುದು. ಇದಕ್ಕೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಸ್ವಲ್ಪ ಮೇಲೆ ಉದುರಿಸಿ ಬಡಿಸಿದರೆ ಚೆನ್ನಾಗಿರುತ್ತದೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: