ಕವಿತೆ: ಶಿವರಾತ್ರಿ

– .ಶಿವರಾತ್ರಿ

ಬಕ್ತರ ನಿಶ್ಕಲ್ಮಶ ಬಕ್ತಿಗೊಲಿಯುತ
ಮುಕ್ತಿಯ ಕರುಣಿಸುವ ಮಹಾದೇವ
ದುಶ್ಟ ದುರುಳ ನಾಸ್ತಿಕರ ಸಂಹರಿಸುತ
ಶಿಶ್ಟರ ಸದಾ ಪೊರಯುವ ಪರಮಶಿವ

ಶಿಶಿರ ರುತುವಿನ ಮಾಗ ಮಾಸದಿ
ಕ್ರಿಶ್ಣ ಪಕ್ಶದ ಚತುರ‍್ದಶಿಯ ದಿನದಿ
ತನುಮನ ಶುದ್ದಿಯಲಿ ಉಪವಾಸದಿ
ಶಿವನಾಮವ ಸ್ಮರಿಸುವರು ಮಂದಿ

ದೇವರ ದೇವ ಮಹಾದೇವನೊಲಿಸಲು
ಉಪವಾಸ, ಜಾಗರಣೆ ಮಾಡಿರೆನ್ನುವ ರಾತ್ರಿ
ಮನದಂದಕಾರವ ಕಳೆದು ಸನ್ಮಾರ‍್ಗದಲಿ
ಮಾನವರ ನಡೆಸುವ ಮಂಗಳಕರ ಶಿವರಾತ್ರಿ

 

(ಚಿತ್ರ ಸೆಲೆ: unsplash.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: