ಮೂಲಂಗಿ ಕಾಯಿ ಕಾರದ ಕಡ್ಡಿ

– ಸವಿತಾ.

ಬೇಕಾಗುವ ಸಾಮಾನುಗಳು

 • ಮೂಲಂಗಿ ಕಾಯಿ – 1 ಬಟ್ಟಲು
 • ಕಡಲೇ ಹಿಟ್ಟು – 1 .5 ಬಟ್ಟಲು
 • ಹಸಿ ಶುಂಟಿ – 1/4 ಇಂಚು
 • ಹಸಿ ಮೆಣಸಿನಕಾಯಿ – 1
 • ಒಣ ಕಾರದ ಪುಡಿ – 1 ಚಮಚ
 • ಅಜೀವಾಯಿನ್ ಅತವಾ ಓಂ ಕಾಳು – 1/4 ಚಮಚ
 • ಜೀರಿಗೆ – 1/4 ಚಮಚ
 • ಇಂಗು – 1/4 ಚಮಚ
 • ಕೊತ್ತಂಬರಿ ಕಾಳು – 1/4 ಚಮಚ
 • ಸೋಂಪು ಕಾಳು – 1/4 ಚಮಚ
 • ಗರಮ್ ಮಸಾಲೆ ಪುಡಿ – 1/4 ಚಮಚ
 • ನಿಂಬೆ ಹಣ್ಣಿನ ರಸ – 1/2 ಹೋಳು
 • ಕಾದ ಎಣ್ಣೆ – 2 ಚಮಚ
 • ಕರಿಯಲು ಎಣ್ಣೆ
 • ಉಪ್ಪು ರುಚಿಗೆ ತಕ್ಕಶ್ಟು

ಮಾಡುವ ಬಗೆ

ಮೂಲಂಗಿ ಕಾಯಿ ತೊಳೆದು ಇಟ್ಟುಕೊಳ್ಳಿ. ಇದಕ್ಕೆ ಅರ‍್ದ ಚಮಚದಶ್ಟು ಉಪ್ಪು ಮತ್ತು ನಿಂಬೆ ರಸ ಹಾಕಿ ಚೆನ್ನಾಗಿ ಕಲಸಿ ಇಟ್ಟುಕೊಳ್ಳಿ. ಜೀರಿಗೆ, ಕೊತ್ತಂಬರಿ ಕಾಳು , ಓಂ ಕಾಳು , ಸೋಂಪು ಕಾಳು ಪುಡಿ ಮಾಡಿ ಕಡಲೇ ಹಿಟ್ಟಿಗೆ ಸೇರಿಸಿ. ಉಪ್ಪು, ಕಾರದ ಪುಡಿ , ಇಂಗು, ಗರಮ್ ಮಸಾಲೆ ಪುಡಿ ಸೇರಿಸಿ. ಹಸಿ ಮೆಣಸಿನಕಾಯಿ ಮತ್ತು ಹಸಿ ಶುಂಟಿಯನ್ನು ಪೇಸ್ಟ್ ಮಾಡಿ ಸೇರಿಸಿ. ಸ್ವಲ್ಪ ನೀರು, ಕಾದ ಎಣ್ಣೆ ಸೇರಿಸಿ ಚೆನ್ನಾಗಿ ಕಲಸಿ , ಹಿಟ್ಟು ಸ್ವಲ್ಪ ಗಟ್ಟಿ ಯಾಗಿ ನಾದಿ ಇಟ್ಟುಕೊಳ್ಳಿ.

ಮೂಲಂಗಿ ಕಾಯಿ ಇದರಲ್ಲಿ ಅದ್ದಿ ತೆಗೆದು ಕಾದ ಎಣ್ಣೆ ಯಲ್ಲಿ ಹಾಕಿ ಕರಿದು ತೆಗೆಯಿರಿ. ಈಗ ಮೂಲಂಗಿ ಕಾಯಿ ಕಾರದ ಕಡ್ಡಿ ಸವಿಯಲು ಸಿದ್ದ. ಸಂಜೆ ಟೀ ಜೊತೆಗೆ ಸ್ನ್ಯಾಕ್ ಆಗಿಯೂ ಸವಿಯಬಹುದು. ಇದನ್ನೂ ಮಕ್ಕಳಿಗೂ ನೀಡಬಹುದು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: