ಹಸಿ ಮೆಣಸಿನಕಾಯಿ ಮಸಾಲೆ

– ಸವಿತಾ.

ಬೇಕಾಗುವ ಸಾಮಗ್ರಿಗಳು

  • ಕಾರ ಇಲ್ಲದ ಹಸಿ ಮೆಣಸಿನಕಾಯಿ – 15
  • ಕಡಲೇ ಬೀಜ – 4 ಚಮಚ
  • ಹುರಿಗಡಲೆ – 4 ಚಮಚ
  • ಜೀರಿಗೆ – 1/2 ಚಮಚ
  • ಕೊತ್ತಂಬರಿ ಕಾಳು – 2 ಚಮಚ
  • ಎಳ್ಳು – 1 ಚಮಚ
  • ಒಣ ಕೊಬ್ಬರಿ ತುರಿ – 4 ಚಮಚ
  • ಚಕ್ಕೆ – 1/4 ಇಂಚು
  • ಎಣ್ಣೆ – 5-6 ಚಮಚ
  • ಟೊಮೋಟೊ – 3
  • ಗೋಡಂಬಿ -15
  • ಸಾಸಿವೆ ಜೀರಿಗೆ – 1/4 ಚಮಚ
  • ಸೋಂಪು ಕಾಳು – 1/4 ಚಮಚ
  • ಮೊಸರು – 1/2 ಬಟ್ಟಲು
  • ನೀರು – 1/2 ಬಟ್ಟಲು
  • ಸಕ್ಕರೆ – 1 ಚಮಚ
  • ಅರಿಶಿಣ ಪುಡಿ ಸ್ವಲ್ಪ
  • ಉಪ್ಪು ರುಚಿಗೆ ತಕ್ಕಶ್ಟು
  • ಕೊತ್ತಂಬರಿ ಸೊಪ್ಪು – ಸ್ವಲ್ಪ

ಮಾಡುವ ಬಗೆ

ಮಿರ‍್ಚಿ ಮಾಡಲು ಬಳಸುವ ದಪ್ಪ ಹಸಿ ಮೆಣಸಿನಕಾಯಿ ತೊಳೆದು, ನಡುವೆ ಕತ್ತರಿಸಿ ಸ್ವಲ್ಪ ಬೀಜ ತೆಗೆದು ಬೇರೆ ಇಟ್ಟಿರಿ. ಮಸಾಲೆ ತುಂಬಲು ಕಡಲೇ ಬೀಜ ಹುರಿದು ನಂತರ ಸಿಪ್ಪೆ ತೆಗೆದು ಇಟ್ಟುಕೊಳ್ಳಿ. ಜೀರಿಗೆ, ಕೊತ್ತಂಬರಿ ಕಾಳು, ಎಳ್ಳು, ಒಣ ಕೊಬ್ಬರಿ ತುರಿ, ಚಕ್ಕೆ ಸ್ವಲ್ಪ ಹುರಿದು ನಂತರ ಎಲ್ಲ ಸೇರಿಸಿ ಮಿಕ್ಶರ್ ನಲ್ಲಿ ರುಬ್ಬಿ ಒಣ ಪುಡಿ ಮಾಡಿ ಇಟ್ಟುಕೊಳ್ಳಿ. ಎರಡು ಚಮಚ ಎಣ್ಣೆ ಸೇರಿಸಿ ಚೆನ್ನಾಗಿ ಕಲಸಿ, ಕತ್ತರಿಸಿದ ಹಸಿ ಮೆಣಸಿನಕಾಯಿಗೆ ತುಂಬಿ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಹುರಿದು ತೆಗೆದಿಡಿ.

ಮತ್ತೆ ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ, ಜೀರಿಗೆ, ಸೋಂಪು ಕಾಳು ಹಾಕಿ ಹುರಿಯಿರಿ. ಗೋಡಂಬಿ ಟೊಮೋಟೊ ನುಣ್ಣಗೆ ರುಬ್ಬಿ ಸೇರಿಸಿ. ತುಂಬಿದ ಹಸಿ ಮೆಣಸಿನಕಾಯಿ ಹಾಕಿ ಹುರಿಯಿರಿ. ಚೆನ್ನಾಗಿ ಹುರಿದ ಮೇಲೆ ಮೊಸರು, ಸ್ವಲ್ವ ನೀರು ಸೇರಿಸಿ ಚೆನ್ನಾಗಿ ತಿರುಗಿಸಿ. ಸಕ್ಕರೆ, ಅರಿಶಿಣ ಪುಡಿ ಹಾಕಿ ಒಂದು ಕುದಿ ಕುದಿಸಿ ಇಳಿಸಿ . ನಂತರ ರುಚಿಗೆ ತಕ್ಕಶ್ಟು ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಸ್ವಲ್ಪ ಕತ್ತರಿಸಿ ಹಾಕಿ.

ಹಸಿ ಮೆಣಸಿನಕಾಯಿ ಮಸಾಲೆ ತಯಾರು, ರೊಟ್ಟಿ, ಚಪಾತಿ ಇಲ್ಲವೇ ಪೂರಿ ಜೊತೆ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: