ದೊಡ್ಡ ಪತ್ರೆ ಎಲೆ ಚಹಾ

– ಸವಿತಾ.

ಬೇಕಾಗುವ ಸಾಮಾನುಗಳು

  • ದೊಡ್ಡ ಪತ್ರೆ (ಅಜವಾನ್) ಎಲೆ – 6
  • ಏಲಕ್ಕಿ – 2
  • ಕರಿಮೆಣಸಿನ ಕಾಳು – 8
  • ಶುಂಟಿ – ಅರ‍್ದ ಇಂಚು
  • ಚಹಾ ಪುಡಿ – 1 ಚಮಚ
  • ನೀರು – 1 ಕಪ್
  • ಹಾಲು – 2 ಕಪ್
  • ಬೆಲ್ಲದ ಪುಡಿ – 2 ಚಮಚ

ಮಾಡುವ ಬಗೆ

ದೊಡ್ಡಪತ್ರೆ ಎಲೆ ತೊಳೆದು, ಶುಂಟಿ, ಕರಿಮೆಣಸಿನ ಕಾಳು, ಏಲಕ್ಕಿ ಎಲ್ಲ ಸೇರಿಸಿ ಸ್ವಲ್ಪ ಕುಟ್ಟಿ ಪುಡಿ ಮಾಡಿ ಇಟ್ಟುಕೊಳ್ಳಿ .

ನೀರು ಕುದಿಯಲು ಇಟ್ಟು, ಕುಟ್ಟಿದ ಪುಡಿ ಸೇರಿಸಿ. ಚಹಾ ಪುಡಿ ಹಾಕಿ ಒಂದು ಕುದಿ ಕುದಿಸಿ. ಹಾಲು, ಬೆಲ್ಲ ಹಾಕಿ ಇನ್ನೊಂದು ಕುದಿ ಕುದಿಸಿ ಇಳಿಸಿದರೆ ದೊಡ್ಡಪತ್ರೆ ಎಲೆ ಚಹಾ ತಯಾರು.
ಕಪ್ ಗೆ ಸೋಸಿಕೊಂಡು ಕುಡಿಯಿರಿ.

(ಇದೊಂದು ಮನೆ ಮದ್ದು , ಡಾಕ್ಟರ್ ಔಶದಿ ಯ ಜೊತೆ ಅತವಾ ಸಲಹೆ ಕೇಳಿ ಕೆಮ್ಮು ಶೀತ ಗಂಟಲು ಜ್ವರ ಬಂದಾಗ, ಆರೋಗ್ಯ ಕಾಪಾಡಲು ದೊಡ್ಡ ಪತ್ರೆ ಎಲೆ ಚಹಾ ಮಾಡಿ ಕುಡಿಯಿರಿ.)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: