ಚಪಾತಿ, ಅನ್ನದ ಜೊತೆ ಸವಿಯಲೊಂದು ಚಟ್ನಿ

– ಸವಿತಾ.

ಮರಾಟಿ ಬಗೆಯ ಪಂಚಾಮ್ರುತ

ಬೇಕಾಗುವ ಸಾಮನುಗಳು

  • ಸಾಸಿವೆ – ಕಾಲು ಚಮಚ
  • ಕರಿಬೇವು ಎಲೆ – 6
  • ಇಂಗು – ಕಾಲು ಚಮಚ
  • ಮೆಂತೆ ಕಾಳು – ಕಾಲು ಚಮಚ
  • ಒಣ ದ್ರಾಕ್ಶಿ – 20
  • ಗೋಡಂಬಿ – 6 (ಬೇಕಾಗಿದ್ದಲ್ಲಿ)
  • ಒಣ ಕೊಬ್ಬರಿ ತುರಿ – 1 ಚಮಚ (ಬೇಕಾಗಿದ್ದಲ್ಲಿ)
  • ಬಿಳಿ ಅತವಾ ಕರಿ ಎಳ್ಳು – 1 ಚಮಚ
  • ಶೇಂಗಾ ಅತವಾ ಕಡಲೇ ಬೀಜ – 1 ಚಮಚ
  • ಹುಣಸೇ ಹಣ್ಣು – 1 ನಿಂಬೆ ಹಣ್ಣಿನ ಅಳತೆಯಶ್ಟು
  • ಬೆಲ್ಲದ ಪುಡಿ – 1 ಚಮಚ
  • ಹಸಿ ಮೆಣಸಿನಕಾಯಿ – 2
  • ಒಣ ಮೆಣಸಿನಕಾಯಿ – 2
  • ಕೊತ್ತಂಬರಿ ಸೊಪ್ಪು – 10 ಕಡ್ಡಿ
  • ಎಣ್ಣೆ – 3 ಚಮಚ

ಮಾಡುವ ಬಗೆ

ಮೊದಲಿಗೆ ಹುಣಸೇ ಹಣ್ಣು ನೆನೆಸಿ ರಸ ತೆಗೆದಿಟ್ಟುಕೊಳ್ಳಬೇಕು. ಶೇಂಗಾ ಮತ್ತು ಎಳ್ಳು ಹುರಿದು ಪುಡಿ ಮಾಡಿ ತೆಗೆದಿಟ್ಟುಕೊಳ್ಳಬೇಕು. ಬೇಕಾದರೆ ಒಣ ಕೊಬ್ಬರಿ ತುರಿ ಸ್ವಲ್ಪ ಸೇರಿಸಬಹುದು.

ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ ಒಗ್ಗರಣೆಗೆ ಸಾಸಿವೆ, ಇಂಗು, ಕರಿಬೇವು, ಮೆಂತ್ಯ ಕಾಳು, ಹಸಿ ಮೆಣಸಿನಕಾಯಿ ಮತ್ತು ಒಣ ಮೆಣಸಿನಕಾಯಿ ಹಾಕಿ ನಂತರ ಕೊತ್ತಂಬರಿ ಸೊಪ್ಪು ಕತ್ತರಿಸಿ ಹಾಕಿ ಹುರಿಯಬೇಕು. ನಂತರ ಗೋಡಂಬಿ, ಒಣ ದ್ರಾಕ್ಶಿ ಹಾಕಿ ಚೆನ್ನಾಗಿ ಹುರಿಯಬೇಕು. ಆಮೇಲೆ ಉಪ್ಪು, ಅರಿಶಿಣ ಪುಡಿ, ಎಳ್ಳು ಮತ್ತು ಕಡಲೆ ಬೀಜದ ಪುಡಿ ಹಾಕಿ ತಿರುಗಿಸಬೇಕು. ನಂತರ ಹುಣಸೆ ರಸ, ಬೆಲ್ಲ ಮತ್ತು ಸ್ವಲ್ಪ ನೀರು ಸೇರಿಸಿ ಒಂದು ಕುದಿ ಕುದಿಸಿ ಇಳಿಸಬೇಕು. ಇದು ಮರಾಟಿ ಶೈಲಿಯ ಚಟ್ನಿಯಾಗಿದ್ದು, ಚಪಾತಿ ಅನ್ನ ಮತ್ತು ಹೋಳಿಗೆ ಜೊತೆ ಸವಿಯಬಹುದು. ಮಹಾರಾಶ್ಟ್ರದಲ್ಲಿ ಹಬ್ಬ ಹರಿದಿನಗಳಲ್ಲಿ ಈ ಅಡುಗೆ ಮಾಡುವುದು ವಾಡಿಕೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: