ಗರಿ ಗರಿಯಾದ ಮಸಾಲೆ ದೋಸೆ

– ಕಲ್ಪನಾ ಹೆಗಡೆ.

ಬೇಕಾಗುವ ಸಾಮಗ್ರಿಗಳು

  • ದೋಸೆ ಅಕ್ಕಿ – 2 ಪಾವು
  • ಉದ್ದಿನ ಬೇಳೆ – ಅರ‍್ದ ಕಪ್ಪು
  • ಹೆಸರು ಬೇಳೆ – ಕಾಲು ಪಾವು
  • ಮೆಂತ್ಯ – ಅರ‍್ದ ಚಮಚ
  • ಕಡ್ಲೆ ಬೇಳೆ – 2 ಚಮಚ
  • ಗಟ್ಟಿ ಅವಲಕ್ಕಿ – ಅರ‍್ದ ಕಪ್ಪು
  • ಸಕ್ಕರೆ – 1 ಚಮಚ
  • ರುಚಿಗೆ ತಕ್ಕಶ್ಟು ಉಪ್ಪು

ಮಾಡುವ ಬಗೆ

ದೋಸೆ ಅಕ್ಕಿಯನ್ನು ಚೆನ್ನಾಗಿ ತೊಳೆದು ಅದಕ್ಕೆ ಅರ‍್ದ ಚಮಚ ಮೆಂತ್ಯವನ್ನು ಹಾಕಿ 4 ಗಂಟೆಗಳ ಕಾಲ ನೆನಸಿಟ್ಟುಕೊಳ್ಳಬೇಕು. ಇನ್ನೊಂದು ಪಾತ್ರೆಯಲ್ಲಿ ಅರ‍್ದ ಕಪ್ಪು ಉದ್ದಿನ ಬೇಳೆ, ಕಾಲು ಕಪ್ಪು ಹೆಸರು ಬೇಳೆ ಮತ್ತು 2 ಚಮಚ ಕಡ್ಲೆಬೇಳೆಗೆ ನೀರನ್ನು ಹಾಕಿ 4 ಗಂಟೆಗಳ ಕಾಲ ನೆನಸಿಟ್ಟುಕೊಳ್ಳಬೇಕು. ನಂತರ ಅರ‍್ದ ಕಪ್ಪು ಅವಲಕ್ಕಿಯನ್ನು ತೊಳೆದು ನೆನಸಿಟ್ಟುಕೊಳ್ಳಬೇಕು. ಇದು ಚೆನ್ನಾಗಿ ನೆನೆದ ಬಳಿಕ ಎಲ್ಲವನ್ನು ಗ್ರೈಂಡರ‍್ಗೆ ಹಾಕಿ ರುಬ್ಬಿಕೊಳ್ಳಬೇಕು. ಹಿಟ್ಟನ್ನು ಪ್ರಿಜ್‍ನಲ್ಲಿ ಇಡದೇ ಹೊರಗಡೆಯೇ ಇಟ್ಟುಕೊಂಡು ಬೆಳಗ್ಗೆ ಅದಕ್ಕೆ 1 ಚಮಚ ಸಕ್ಕರೆ, ರುಚಿಗೆ ತಕ್ಕಶ್ಟು ಉಪ್ಪನ್ನು ಹಾಕಿ ಕಲಸಿಕೊಳ್ಳಬೇಕು.

ದೋಸೆ ಕಾವಲಿ ಕಾದಬಳಿಕ ದೋಸೆ ಹಿಟ್ಟು ಹಾಕಿ ಸೌಟಿನಿಂದ ತೆಳ್ಳಗೆ ಮಾಡಿ ಅದಕ್ಕೆ ಕಾಲು ಚಮಚ ಎಣ್ಣೆ ಅತವಾ ತುಪ್ಪವನ್ನು ಹಾಕಿ ಬೇಯಿಸಿಕೊಳ್ಳಬೇಕು. ಬೇಕಾದಲ್ಲಿ ಸ್ವಲ್ಪ ಚಟ್ನಿಪುಡಿಯನ್ನು ಉದುರಿಸಿಕೊಳ್ಳಬಹುದು. ಗರಿ ಗರಿಯಾಗಿ ತಯಾರಿಸಿದ ಮಸಾಲೆ ದೋಸೆಯನ್ನು ಆಲೂಗಡ್ಡೆ ಪಲ್ಯ, ಚಟ್ನಿ ಜೊತೆಗೆ ಸವಿಯಲು ನೀಡಬಹುದು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: