ಕವಿತೆ: ದಕ್ಕದ ಜಾಡು

– ಕಾಂತರಾಜು ಕನಕಪುರ.

ಮನಸು, Mind, memories, ನೆನಪು

ಕಂಡದ್ದು
ಕಣ್ಮರೆಯಾದದ್ದು
ಕನಸಿನಲಿ ಸುಮ್ಮನೆ
ನಕ್ಕು ನಲಿದಂತೆ…

ನುಡಿದದ್ದು,
ನುಡಿಯಲಾಗದ್ದು
ನೀರಿನೊಳಗೆ ನಲಿವ
ಮೀನು ಉಲಿದಂತೆ…

ಬರೆದದ್ದು,
ಬರೆಯಲಾಗದ್ದು
ಎದೆಗೆ ಎಂದೋ ಬಿದ್ದ
ಅಕ್ಕರದ ಬೀಜ ಮೊಳೆವಂತೆ…

ಕರೆದದ್ದು,
ಕರೆಯೋಲೆ ಇಲ್ಲದ್ದು
ಕೂಡಿ ಕಲೆತ ನದಿಗಳು
ಸಾಗರ ಸೇರಿದಂತೆ…

ಕಣ್ಣು ಕಾಣದ್ದು
ನಾಲಿಗೆಗೆ ನಿಲುಕದ್ದು
ಅಕ್ಕರ ಹಿಡಿದಿಡಲಾಗದ್ದು
ಎಲ್ಲರಿಗೂ ಹೇಳಲಾಗದ್ದು
ಎಲ್ಲರಿಗೂ ತಿಳಿಯದ್ದು
ಮನಸುಗಳಿಗೆ ಗೋಚರವಾದಂತೆ…

(ಚಿತ್ರಸೆಲೆ : sloanreview.mit.edu)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: