ಕೋಕೋ ಬರ‍್ಪಿ

– ಸವಿತಾ.

ಬೇಕಾಗುವ ಸಾಮಾನುಗಳು

  • ಹಾಲು – 1.5 ಲೀಟರ್
  • ಕರ‍್ಜೂರ – 6
  • ಒಣ ದ್ರಾಕ್ಶಿ – 20
  • ಬಾದಾಮಿ – 6
  • ಗೋಡಂಬಿ – 6
  • ಏಲಕ್ಕಿ – 4
  • ಲವಂಗ – 2
  • ಚಕ್ಕೆ – 1/4 ಇಂಚು
  • ಸಕ್ಕರೆ ಅತವಾ ಬೆಲ್ಲದ ಪುಡಿ – 8 ಚಮಚ
  • ಕೋಕೋ ಪುಡಿ ಅತವಾ ಬೌರ‍್ನ್ ವಿಟಾ ಪುಡಿ – 3 ಚಮಚ
  • ಕಾರ‍್ನ್ ಪ್ಲೋರ್ – 2 ಚಮಚ
  • ಪಾರ‍್ಲೆ-ಜಿ ಬಿಸ್ಕಟ್ (5 ರೂಪಾಯಿ ಪ್ಯಾಕೆಟ್) – 1

ಮಾಡುವ ಬಗೆ

ಒಂದು ಲೀಟರ್ ಹಾಲು ಕಾಯಿಸಿ, ನಿಂಬೆರಸ ಬೆರೆಸಿ ನಂತರ ಸೋಸಿ ಪನ್ನೀರ್ ಮಾಡಿ ಇಟ್ಟುಕೊಳ್ಳಿ. ಅರ‍್ದ ಲೀಟರ್ ಹಾಲು ಕಾಯಿಸಿ ಆರಿದ ನಂತರ ಕಾರ‍್ನ್ ಪ್ಲೋರ್ ಹಾಕಿ ಚೆನ್ನಾಗಿ ಕಲಸಿ ನಂತರ ಕುದಿಯಲು ಇಡಬೇಕು. ಕರ‍್ಜೂರದ ಬೀಜ ತೆಗೆದು ಸ್ವಲ್ಪ ಕುಟ್ಟಿ, ಒಣ ದ್ರಾಕ್ಶಿ ಹಾಕಿ ಪನ್ನೀರ್ ಸೇರಿಸಿ ತಿರುವುತ್ತ, ಸಕ್ಕರೆ ಸೇರಿಸಿ. ಕೋಕೋ ಪುಡಿ ಅತವಾ ಬೌರ‍್ನ್ ವಿಟಾ ಪುಡಿ ಹಾಕಿ ಚೆನ್ನಾಗಿ ತಿರುಗಿಸಿ. ನೀರೆಲ್ಲಾ ಹೋಗಿ ಬರ‍್ಪಿ ಕತ್ತರಿಸುವ ಹಾಗೇ ಗಟ್ಟಿ ಆಗಬೇಕು. ಆಗ ಒಲೆ ಆರಿಸಿ. ಲವಂಗ, ಏಲಕ್ಕಿ, ಚಕ್ಕೆ ಪುಡಿ ಮಾಡಿ ಹಾಕಿ ಚೆನ್ನಾಗಿ ತಿರುವಿ ಇಟ್ಟುಕೊಳ್ಳಿ. ಬಿಸ್ಕಟ್ ಪುಡಿ ಮಾಡಿ ಒಂದು ತಟ್ಟೆ ಮೇಲೆ ಹರಡಿ. ಅದರ ಮೇಲೆ ತಿರುವಿದ ಮಿಶ್ರಣ ಹಾಕಿ ಕೈಯಿಂದ ತಟ್ಟಿ ಮತ್ತು ಬಾದಾಮಿ, ಗೋಡಂಬಿ ಪುಡಿ ಮಾಡಿಕೊಂಡು ಮೇಲೆ ಉದುರಿಸಿ ಇಟ್ಟು ಬಿಡಿ. ಆರಿದ ಮೇಲೆ ಕತ್ತರಿಸಿ ತುಂಡು ಮಾಡಿ. ಈಗ ಕೋಕೋ ಬರ‍್ಪಿ ಸವಿಯಲು ಸಿದ್ದ. ಮಕ್ಕಳಿಗೂ, ದೊಡ್ಡವರಿಗೂ ಇಶ್ಟವಾಗುವ ಸರಳ ಸಿಹಿ. ಎರಡು ದಿನ ಇಟ್ಟು ತಿನ್ನುವ, ಚಾಕ್ಲೇಟ್ ಪ್ಲೇವರ್ ನ ಕೋಕೋ ಬರ‍್ಪಿ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: