ಸೇಬು ಹಣ್ಣಿನ ಸೂಪ್

– ಸವಿತಾ.

ಸೇಬು ಹಣ್ಣು

ಬೇಕಾಗುವ ಸಾಮಾನುಗಳು

  • ಸೇಬು ಹಣ್ಣು – 2
  • ನಿಂಬೆ ಹೋಳು – ಅರ‍್ದ
  • ಬೆಳ್ಳುಳ್ಳಿ ಎಸಳು – 2
  • ಹಸಿ ಶುಂಟಿ – ಕಾಲು ಇಂಚು
  • ಹಸಿ ಮೆಣಸಿನಕಾಯಿ – 1
  • ಬೆಣ್ಣೆ ಅತವಾ ತುಪ್ಪ – 1 ಚಮಚ
  • ಅರಿಶಿಣ ಪುಡಿ – ಕಾಲು ಚಮಚ
  • ಕರಿಮೆಣಸಿನ ಕಾಳು – 4
  • ಏಲಕ್ಕಿ – 1
  • ಸಕ್ಕರೆ – 1 ಚಮಚ
  • ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ಪುದೀನಾ ಸ್ವಲ್ಪ
  • ಉಪ್ಪು ರುಚಿಗೆ ತಕ್ಕಶ್ಟು

ಮಾಡುವ ಬಗೆ

ಮೊದಲಿಗೆ ಸೇಬು ಹಣ್ಣಿನ ಸಿಪ್ಪೆ ತೆಗೆದು, ಅದನ್ನು ಮದ್ಯದಲ್ಲಿ ಕತ್ತರಿಸಿ ಅದರಲ್ಲಿರುವ ಬೀಜಗಳನ್ನು ತೆಗೆಯಿರಿ. ಆಮೇಲೆ ಮಿಕ್ಸರ‍್‍‍‍‍ನಲ್ಲಿ ರುಬ್ಬಿ, ಅರ‍್ದ ನಿಂಬೆ ಹಣ್ಣಿನ ರಸ ಸೇರಿಸಿ ಇಟ್ಟುಕೊಳ್ಳಬೇಕು. ಬೆಳ್ಳುಳ್ಳಿ ಎಸಳು, ಹಸಿ ಶುಂಟಿ ಮತ್ತು ಹಸಿ ಮೆಣಸಿನಕಾಯಿ ಪೇಸ್ಟ್  ಮಾಡಿಟ್ಟುಕೊಳ್ಳಬೇಕು.

ಬಾಣಲೆಗೆ ಒಂದು ಚಮಚ ಬೆಣ್ಣೆ ಅತವಾ ತುಪ್ಪ ಹಾಕಿ ಬಿಸಿಮಾಡಿ. ಇದಕ್ಕೆ ಹಸಿ ಶುಂಟಿ ಪೇಸ್ಟ್ ಹಾಕಿ ಚೆನ್ನಾಗಿ ಹುರಿಯಿರಿ. ಆಮೇಲೆ ಉಪ್ಪು, ಅರಿಶಿಣಪುಡಿ ಮತ್ತು ರುಬ್ಬಿದ ಸೇಬು ಹಾಕಿ ಸ್ವಲ್ಪ ನೀರು ಸೇರಿಸಿ ಒಂದು ಕುದಿ ಕುದಿಸಿ. ನಂತರ ಕರಿಮೆಣಸಿನ ಕಾಳು, ಕುಟ್ಟಿ ಪುಡಿಮಾಡಿದ ಏಲಕ್ಕಿ ಮತ್ತು ಸಕ್ಕರೆ ಹಾಕಿ ತಿರುಗಿಸಿ ಒಲೆ ಆರಿಸಿ. ಆಮೇಲೆ ಕೊತ್ತಂಬರಿ ಸೊಪ್ಪು, ಸ್ವಲ್ಪ ಪುದೀನಾ ಕತ್ತರಿಸಿ ಮೇಲೆ ಉದುರಿಸಿ. ಈಗ ಸೇಬು ಹಣ್ಣಿನ ಸೂಪ್ ಸವಿಯಲು ಸಿದ್ದವಾಗಿದೆ. ಆರೋಗ್ಯಕರ ಬಿಸಿ ಬಿಸಿ ಸೂಪ್ ಮಳೆಗಾಲದಲ್ಲಿ ಮಾಡಿಟ್ಟುಕೊಂಡು ಇಡೀ ದಿನ ಕುಡಿಯಬಹುದು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: