ಕವಿತೆ: ನೆನಪುಗಳೆಂದರೆ

– ಕಾಂತರಾಜು ಕನಕಪುರ.

ನೆನಪುಗಳೆಂದರೆ
ಕಗ್ಗತ್ತಲೆಯ ಕೋಣೆಯಲಿ
ಹಚ್ಚಿಟ್ಟ ಹಣತೆಯಿಂದ
ಹರಡಿಕೊಂಡ ಬೆಳಕು

ನೆನಪುಗಳೆಂದರೆ
ಮುಂಜಾನೆ ಮನೆಯಂಗಳದ
ರಂಗೋಲಿಯಲಿ ಸಿಕ್ಕಿಬಿದ್ದ
ರಾತ್ರಿ ಬೆಳಗಿದ ಚುಕ್ಕಿಗಳು

ನೆನಪುಗಳೆಂದರೆ
ಹರಿದ ಮಾಡಿನ ಗುಡಿಸಲಿನ
ನೆಲ ಗೋಡೆಗಳಿಗೆ ತೂರಿಬಿಟ್ಟ
ಬೆಳಕಿನ ಕೋಲುಗಳು

ನೆನಪುಗಳೆಂದರೆ
ಉರಿವ ಸೂರ‍್ಯನೆದೆಗೆ ಒದ್ದು ನಿಂತ
ಅಂಗಳದ ಹೊಂಗೆ ಮರವು
ಹಾಸಿದ ನೆರಳ ಹಾಸಿಗೆಯು

(ಚಿತ್ರಸೆಲೆ: fos.cmb.ac.lk )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: