ಒರಳು ಚಿತ್ರಾನ್ನ

– ಸವಿತಾ.

ಬೇಕಾಗುವ ಸಾಮಾನುಗಳು

  • ತೆಂಗಿನ ಕಾಯಿ ತುರಿ – 1 ಬಟ್ಟಲು
  • ಹಸಿ ಮೆಣಸಿನಕಾಯಿ – 4
  • ಒಣ ಮೆಣಸಿನಕಾಯಿ – 2
  • ಕೊತ್ತಂಬರಿ ಸೊಪ್ಪು ಸ್ವಲ್ಪ
  • ಕರಿಬೇವು – 20 ಎಲೆ
  • ಜೀರಿಗೆ – 1/2  ಚಮಚ
  • ಬೆಲ್ಲ – 2 ಚಮಚ
  • ಅಕ್ಕಿ – ಒಂದು ಲೋಟ
  • ಎಣ್ಣೆ – 4 ಚಮಚ
  • ಸಾಸಿವೆ – 1/4 ಚಮಚ
  • ಇಂಗು – ಒಂದು ಚಿಟಿಕೆ
  • ಕಡಲೆ ಬೇಳೆ – 1 ಚಮಚ
  • ಉದ್ದಿನ ಬೇಳೆ – 1 ಚಮಚ
  • ಕಡಲೆ (ಶೇಂಗ) ಬೀಜ – 2 ಚಮಚ
  • ಉಪ್ಪು ರುಚಿಗೆ ತಕ್ಕಷ್ಟು
  • ಅರಿಶಿಣ ಪುಡಿ ಸ್ವಲ್ಪ
  • ಗೋಡಂಬಿ ಬೇಕಾದರೆ ಹಾಕಿ
  • ಹುಣಸೆ ರಸ – ಅರ‍್ದ ನಿಂಬೆ ಹಣ್ಣಿನ ಗಾತ್ರದಶ್ಟು

ಮಾಡುವ ಬಗೆ

ಅಕ್ಕಿ ತೊಳೆದು, ಅನ್ನ ಮಾಡಿ ಇಟ್ಟುಕೊಳ್ಳಿ. ಹಸಿ ಕೊಬ್ಬರಿತುರಿ, ಹಸಿ ಮೆಣಸಿನಕಾಯಿ, ಕರಿಬೇವಿನ ಎಲೆ ಸ್ವಲ್ಪ, ಕೊತ್ತಂಬರಿ ಸೊಪ್ಪು ಸ್ವಲ್ಪ ಮತ್ತು ಜೀರಿಗೆಯನ್ನು ಮಿಕ್ಸರ್ ನಲ್ಲಿ ರುಬ್ಬಿ ಇಟ್ಟುಕೊಳ್ಳಿ (ಕಲ್ಲಿನಲ್ಲಿ ರುಬ್ಬಿದರೆ ಹೆಚ್ಚು ರುಚಿ). ಹುಣಸೆ ಹಣ್ಣನ್ನು ನೀರಿನಲ್ಲಿ ನೆನೆಸಿಟ್ಟು ರಸ ತೆಗೆದಿಡಿ.
ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ, ಅದರಲ್ಲಿ ಸಾಸಿವೆ, ಇಂಗು, ಕರಿಬೇವು, ಒಣ ಮೆಣಸಿನಕಾಯಿ (ಮುರಿದು ಹಾಕಿ), ಕಡಲೆ ಬೇಳೆ, ಉದ್ದಿನ ಬೇಳೆ, ಕಡಲೆ ಬೀಜ ಹಾಕಿ ಹುರಿಯಿರಿ. ಉಪ್ಪು ಮತ್ತು ಅರಿಶಿಣ ಸೇರಿಸಿ, ರುಬ್ಬಿದ ಮಿಶ್ರಣವನ್ನು ಹಾಕಿ ಹುರಿಯಿರಿ. ಹುಣಸೆ ರಸ ಮತ್ತು ಬೆಲ್ಲ ಸೇರಿಸಿ ಚೆನ್ನಾಗಿ ಹುರಿದು ಒಲೆ ಆರಿಸಿ. ಮಾಡಿಟ್ಟ ಅನ್ನ ಸೇರಿಸಿ ಚೆನ್ನಾಗಿ ಕಲಸಿ, ನಂತರ ಸ್ವಲ್ಪ ಕತ್ತರಿಸಿದ ಕೊತ್ತಂಬರಿ ಸೊಪ್ಪು ಉದುರಿಸಿ. ಈಗ ಒರಳು ಚಿತ್ರಾನ್ನ ಸವಿಯಲು ಸಿದ್ಧ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: