ಕವಿತೆ: ಈ ಜನ್ಮ ಪಾವನ

– .

ಆಗಮ ಶಾಸ್ತ್ರಗಳ ಪಟಣವನು
ಮಾಡಿದರೆ ಈ ಜನ್ಮ ಪಾವನ
ಗುರು ಹಿರಿಯರ ಲೀಲೆಯನು
ಹಾಡಿದರೆ ಈ ಜನ್ಮ ಪಾವನ

ನರಲೋಕದ ಹುಳುವಾಗಿ ತೊಳಲಿ
ಬಳಲಿ ಸಾಯುವೆಯೇಕೆ
ಆತ್ಮವು ಪರಮಾತ್ಮನಲ್ಲಿ ಒಂದಾಗಿ
ಕೂಡಿದರೆ ಈ ಜನ್ಮ ಪಾವನ

ಪಾಪದ ಪಿಂಡವಾಗಿ ಲೋಕದಿ
ಬಾಳುವಾಸೆಯೇಕೆ
ಸಾತ್ವಿಕದ ಬಾವದಿಂದ ಮನವು
ಮಿಡಿದರೆ ಈ ಜನ್ಮ ಪಾವನ

ಕೈಲಾಸ ಗಿರಿವಾಸವ ನೆನೆಯದ
ಹ್ರುದಯ ವ್ಯರ‍್ತವಲ್ಲವೆ ಹೇಳು
ಮಾತಾಪಿತ್ರುಗಳ ಸೇವೆಯ ಬಯಸಿ
ಬೇಡಿದರೆ ಈ ಜನ್ಮ ಪಾವನ

ಸುಮದಂತೆ ಬದುಕು ಕ್ಶಣದಲ್ಲಿ
ಉರುಳಿ ಹೋಗುವುದು ಅಬಿನವ
ಪರರ ಹಿತವದು ಅನವನರತ
ಮೂಡಿದರೆ ಈ ಜನ್ಮ ಪಾವನ

(ಚಿತ್ರಸೆಲೆ : pixabay.com  )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: