ಸುಕಡಿ: ಒಂದು ಸಿಹಿ ತಿಂಡಿ

– ಸವಿತಾ.

ಬೇಕಾಗುವ ಸಾಮಾನುಗಳು

  • ಗೋದಿ ಹಿಟ್ಟು – 1 ಬಟ್ಟಲು
  • ತುಪ್ಪ – 1/2 ಬಟ್ಟಲು
  • ಬೆಲ್ಲದ ಪುಡಿ – 3/4 ಬಟ್ಟಲು
  • ಏಲಕ್ಕಿ – 2
  • ಜಾಯಿಕಾಯಿ ಪುಡಿ – 1/4 ಚಮಚ
  • ಲವಂಗ – 2

ಮಾಡುವ ಬಗೆ

ಬೆಲ್ಲ ನುಣ್ಣಗೆ ಪುಡಿ ಮಾಡಿ ಇಟ್ಟುಕೊಳ್ಳಿ. ಏಲಕ್ಕಿ, ಲವಂಗ, ಜಾಯಿಕಾಯಿ ಪುಡಿ ಮಾಡಿ ಇಟ್ಟುಕೊಳ್ಳಿ. ತುಪ್ಪ ಹಾಕಿ ಗೋದಿ ಹಿಟ್ಟು ಚೆನ್ನಾಗಿ ಹುರಿಯಿರಿ. ಬೆಲ್ಲದ ಪುಡಿ ಸೇರಿಸಿ ಚೆನ್ನಾಗಿ ಕಲಸಿ ಇಟ್ಟುಕೊಳ್ಳಿ. ಏಲಕ್ಕಿ ಪುಡಿ ಸೇರಿಸಿ ತಿರುಗಿಸಿ. ಬೇಕಾದರೆ ಗೋಡಂಬಿ, ಬಾದಾಮಿ ಕತ್ತರಿಸಿ ಹಾಕಬಹುದು. ಒಂದು ಚೌಕ ಡಬ್ಬಿಗೆ ತುಪ್ಪ ಸವರಿ, ಹುರಿದ ಹಿಟ್ಟು ಸುರಿದು ಒತ್ತಿ ಆರಲು ಬಿಡಬೇಕು. ನಂತರ ಚೌಕ ಆಕಾರ ಇಲ್ಲವೇ ಡೈಮಂಡ್ ಆಕಾರ ಕೊಟ್ಟು ಕತ್ತರಿಸಿ ಇಟ್ಟುಕೊಳ್ಳಿ. ಈಗ ಸುಕಡಿ ಸವಿಯಲು ಸಿದ್ದ. ಗುಜರಾತ್ ನಲ್ಲಿ ಪ್ರಸಾದವಾಗಿ ಸುಕಡಿ ತಯಾರಿಸುತ್ತಾರೆ. ಹಬ್ಬ ಹರಿದಿನಗಳಲ್ಲಿಯೂ ತಯಾರಿಸಿ ಸವಿಯಬಹುದು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: