ಕವಿತೆ: ಮುಂಜಾನೆಯ ಹೊಂಬಿಸಿಲು

– ವಿನು ರವಿ.

customized-3d-photo-wallpaper-for-walls-3-d-wall-murals-natural-landscape-font-b-forest-b

ಮುಂಜಾನೆಯ ಹೊಂಬಿಸಿಲಿಗೆ
ತಂಗಾಳಿಯು ಮೈಯೊಡ್ಡಿದೆ

ಮಲ್ಲಿಗೆ ಹೂ ನರುಗಂಪಿಗೆ
ದುಂಬಿಯು ರೆಕ್ಕೆ ಬಿಚ್ಚುತ್ತಿದೆ

ಕರಗಿದ ಇಬ್ಬನಿಯಲಿ
ಹಸುರೆಲ್ಲವು ಮೀಯುತ್ತಿದೆ

ಚಿಲಿಪಿಲಿ ಬಣ್ಣಕೆ
ಬಾನೆಲ್ಲಾ ರಂಗೇರಿದೆ

ಹೊಸತಾದ ಕುಡಿಯನು
ಬೆಳಕು ಕೈಹಿಡಿದಿದೆ

ಇಳೆಯ ಬದುಕಿನಲಿ
ಚೆಲುವು ಕಳೆಗಟ್ಟುತ್ತಿದೆ

(ಚಿತ್ರ ಸೆಲೆ: aliexpress.com )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.