ಹನಿಗವನಗಳು: ಮೋಡ ಮುಸುಕಿದ ಮುಗಿಲಿಗೆ…

– ವಿನು ರವಿ.

nature

ಮೋಡ ಮುಸುಕಿದ
ಮುಗಿಲಿಗೆ
ಬೆಳಕಿನ ದ್ಯಾನ
ಚಳಿಯ ಹೊದಿಕೆಯ
ಸರಿಸಿ ಮೇಲೇಳಲು
ದಿನಕರನಿಗೆ ಅದೇಕೊ
ಬಿಗುಮಾನ

ಕಣ್ಣೊಳಗೆ ಕನಸುಗಳು
ಗರಿ ಗೆದರಿದಾಗ
ಮರುಬೂಮಿಯಲ್ಲೂ
ನೀರಿನ ಚಿಲುಮೆ ಚಿಮ್ಮುತ್ತದೆ
ಕಣ್ಣೊಳಗೆ ಕನಸುಗಳು
ಕರಗಿಹೋದಾಗ
ನೀರೊಳಗೆ ಮುಳುಗಿದ್ದರೂ
ಬಾಯಾರಿದಂತಾಗುತ್ತದೆ

ಉರಿ ಬಿಸಿಲಿನ
ಕಡು ತಾಪಕೆ
ತಂಗಾಳಿಗೂ ಬೆವರಿಳಿಯುತಿದೆ
ಬಿರುಗಾಳಿಯ ಬಯಕೆಗೆ
ತರಗೆಲೆಯು
ನಡುಗುತಿದೆ

(ಚಿತ್ರ ಸೆಲೆ: stuartwilde.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: