ಕವಿತೆ: ನಿನ್ನದೇ ನೆನಪಿನ ಮಿಂಚು

– ವಿನು ರವಿ.

ಕಡಲ ತೀರದಲಿ
ಅಲೆಗಳುಲಿವ ಮೆಲುದನಿಯಲಿ
ಮರಳೊಳಗೆ ಊರಿದ
ಹೆಜ್ಜೆಗಳ ತುಂಬಾ
ನಿನ್ನದೇ ನೆನಪಿನ ತಂಪು

ಬೆಟ್ಟ ಕಣಿವೆಯಲಿ
ನೀಲಿ ಹೂಗಳ ಕಂಪಿನಲಿ
ಜಾರುವ ತಂಗಾಳಿಯ
ಜೋಗುಳ ಹಾಡಿನ ತುಂಬಾ
ನಿನ್ನದೇ ನೆನಪಿನ ಇಂಪು

ಬಾನಂಗಳದಲಿ
ತೇಲಾಡೊ ಬೆಳ್ಮುಗಿಲಲಿ
ಬೆಳಕು ಬರೆದಿರುವ
ಬೆಳ್ಳಿಗೆರೆಗಳ ತುಂಬಾ
ನಿನ್ನದೇ ನೆನಪಿನ ಮಿಂಚು

(ಚಿತ್ರ ಸೆಲೆ: ninjamarketing.it)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: