ಕವಿತೆ: ಪ್ರೀತಿಯ ಅಪ್ಪು

– ಶಾಂತ್ ಸಂಪಿಗೆ.

ಮುತ್ತು ರಾಜರ ಮಗನಿವನು
ಮುದ್ದು ಯುವ ರಾಜರತ್ನನು
ಎಳೆಯ ವಯಸ್ಸಿನಲ್ಲೇ ನಟನೆಗೆ
ರಾಶ್ಟ್ರ ಪ್ರಶಸ್ತಿ ಪಡೆದವನು

ಮಗುವಿನಂತ ಮುಗ್ದ ಮನಸು
ಕುಣಿದರಿವನು ಎಂತ ಸೊಗಸು
ಪ್ರತಿ ಮಾತಲು ದೊಡ್ಡ ಕನಸು
ಕನ್ನಡ ನಾಡ ಹೆಮ್ಮೆಯ ಕೂಸು

ಕರುಣೆ ತುಂಬಿದ ಗುಣದವನು
ಬಡವರ ಬಾಳಿಗೆ ಬೆಳಕಾದವನು
ಕೋಟಿ ಕನಸಿಗೆ ಸ್ಪೂರ‍್ತಿಯಾದನು
ನಮ್ಮೆಲ್ಲರ ಪ್ರೀತಿಯ ಅಪ್ಪು ಇವನು

ನಿಮ್ಮ ಅಗಲಿಕೆ ನಮ್ಮ ಕಾಡಿದೆ
ಕನ್ನಡ ನಾಡು ಕಂಬನಿ ಮಿಡಿದಿದೆ
ನಿಮ್ಮ ಸಾದನೆ ಹೆಮ್ಮೆ ತಂದಿದೆ
ಸರಳ ಬದುಕು ಸ್ಪೂರ‍್ತಿ ನೀಡಿದೆ

( ಚಿತ್ರಸೆಲೆ: kannada.news18.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: