ಕ್ಯಾರೇಟ್ ಹಲ್ವಾ

ಕಲ್ಪನಾ ಹೆಗಡೆ.

ಬೇಕಾಗುವ ಸಾಮಾನುಗಳು

  • ಕ್ಯಾರೇಟು – 10
  • ಸಕ್ಕರೆ – 2 ಕಪ್ಪು
  • ಚಿಟಿಕೆ ಉಪ್ಪು
  • ತುಪ್ಪ – 4 ಚಮಚ
  • ಸ್ವಲ್ಪ ಗೊಡಂಬಿ, ದ್ರಾಕ್ಶಿ, ಬಾದಾಮಿ
  • ಹಾಲು – 1 ಕಪ್ಪು

ಮಾಡುವ ಬಗೆ

ಮೊದಲು ಕ್ಯಾರೇಟನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆದು ಮಾಂದ್ರಿಯಲ್ಲಿ ತುರಿದುಕೊಳ್ಳಿ. ಆನಂತರ ಒಂದು ಬಾಣಲೆಯಲ್ಲಿ 2 ಚಮಚ ತುಪ್ಪ ಹಾಕಿ ಕಾದ ಬಳಿಕ ಅದಕ್ಕೆ ಗೋಡಂಬಿ, ಚೂರು ಮಾಡಿದ ಬಾದಾಮಿ, ದ್ರಾಕ್ಶಿ ಹಾಕಿ ಹುರಿದುಕೊಳ್ಳಿ.  ಆಮೇಲೆ ಇದನ್ನು ಒಂದು ಬೌಲಿನಲ್ಲಿ ತೆಗೆದಿಟ್ಟು ಬಾಣಲೆಗೆ ತುರಿದಿಟ್ಟ ಕ್ಯಾರೇಟನ್ನು ಹಾಕಿ ಹುರಿದುಕೊಳ್ಳಿ(ಸ್ವಲ್ಪ ಹಸಿ ವಾಸನೆ ಹೋಗುವ ತನಕ). ಆಮೇಲೆ ಒಂದು ಕಪ್ ಹಾಲನ್ನು ಹಾಕಿ ಬೇಯಿಸಿಕೊಳ್ಳಿ. ಇದು ಸ್ವಲ್ಪ ಬೆಂದ ನಂತರ ಅದಕ್ಕೆ 2 ಕಪ್ ಸಕ್ಕರೆ, 2 ಚಮಚ ತುಪ್ಪ, ಏಲಕ್ಕಿ ಪುಡಿ, ಚಿಟಿಕೆ ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಿರಿ. ಇದು ಸ್ವಲ್ಪ ಗಟ್ಟಿಯಾಗುವ ತನಕ ಸೌಟಿನಿಂದ ಕಲಸಿಕೊಳ್ಳಿ. ಸ್ವಲ್ಪ ಪಾಕ ಬಂದ ನಂತರ ಪಾತ್ರೆ ಬಿಡುತ್ತಾ ಬಂದಾಗ ಕೆಳಗೆ ಇಳಿಸಿಕೊಳ್ಳಿ. ಆನಂತರದಲ್ಲಿ ಅದಕ್ಕೆ ಹುರಿದಿಟ್ಟ ಗೋಡಂಬಿ, ಬಾದಾಮಿ, ದ್ರಾಕ್ಶಿ ಹಾಕಿ ಕಲಸಿ ತಟ್ಟೆಗೆ ಹಾಕಿ ಸವಿಯಲು ನೀಡಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: