ಪಪ್ಪಾಯಿ ಹಣ್ಣಿನ ಹಲ್ವಾ

– ಸವಿತಾ.

ಬೇಕಾಗುವ ಸಾಮಾನುಗಳು

  • ಪಪ್ಪಾಯಿ ಹಣ್ಣಿನ ಹೋಳುಗಳು – 2 ಬಟ್ಟಲು
  • ಹಸಿ ಕೊಬ್ಬರಿ ಅತವಾ ಒಣ ಕೊಬ್ಬರಿ ತುರಿ – 1 ಬಟ್ಟಲು
  • ಬೆಲ್ಲ ಇಲ್ಲವೇ ಸಕ್ಕರೆ – 1 ಬಟ್ಟಲು
  • ತುಪ್ಪ – 4 ಚಮಚ
  • ಏಲಕ್ಕಿ – 2
  • ಲವಂಗ – 2
  • ಗೋಡಂಬಿ, ಬಾದಾಮಿ, ಒಣ ದ್ರಾಕ್ಶಿ – (ಬೇಕಾದರೆ ಹಾಕಬಹುದು)

ಮಾಡುವ ಬಗೆ

ಹಸಿ ಕೊಬ್ಬರಿ ತುರಿಗೆ ಒಂದು ಚಮಚ ತುಪ್ಪ ಹಾಕಿ ಚೆನ್ನಾಗಿ ಹುರಿದು ತೆಗೆಯಿರಿ. ಎರಡು ಚಮಚ ತುಪ್ಪ ಹಾಕಿ ಪಪ್ಪಾಯಿ ಹಣ್ಣಿನ ಹೋಳುಗಳನ್ನು ಹುರಿದು ನಂತರ ಸಕ್ಕರೆ ಅತವಾ ಬೆಲ್ಲ ಸೇರಿಸಿ . ಆಮೇಲೆ ಹುರಿದಿಟ್ಟ ಕೊಬ್ಬರಿ ತುರಿ ಹಾಕಿ ಚೆನ್ನಾಗಿ ಕೈಯಾಡಿಸುತ್ತಿರಿ. ಗಟ್ಟಿಯಾದ ಮೇಲೆ ಒಲೆ ಆರಿಸಿ ಇಳಿಸಿ. ಏಲಕ್ಕಿ ಲವಂಗ ಪುಡಿ ಮಾಡಿ ಸೇರಿಸಿ. ಬೇಕಾದರೆ ಬಾದಾಮಿ ಗೋಡಂಬಿ ಚೂರು ಮತ್ತು ಒಣ ದ್ರಾಕ್ಶಿ ಹಾಕಬಹುದು. ಒಂದು ತಟ್ಟೆಗೆ ತುಪ್ಪ ಸವರಿ, ಮಾಡಿದ ಹಲ್ವಾ ಮಿಶ್ರಣ ಸುರಿದು ಚೌಕಾಕಾರ ಅತವಾ ಡೈಮಂಡ್ ಆಕಾರ ಕೊಟ್ಟು ಕತ್ತರಿಸಿ ಇಟ್ಟುಕೊಳ್ಳಿ. ಈಗ ಪಪ್ಪಾಯಿ ಹಣ್ಣಿನ ಹಲ್ವಾ ಸವಿಯಲು ಸಿದ್ದ. ಆರೋಗ್ಯಕರ ಹಣ್ಣಿನ ಹಲ್ವಾ ಮಕ್ಕಳಿಗೆ, ದೊಡ್ಡವರಿಗೆ ಎಲ್ಲರಿಗೂ ಒಳ್ಳೆಯದು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: