ಮಕ್ಕಳ ಕವಿತೆ: ಸವಾರಿ

– ವೆಂಕಟೇಶ ಚಾಗಿ.

ಅಪ್ಪನ ಮೇಲೆ ಅಂಬಾರಿ
ಹೊರಟೆ ನಾನು ಸವಾರಿ
ಆನೆ ಬಂತು ದಾರಿಬಿಡಿ
ಅಪ್ಪಾ ನೀನು ನಡಿನಡಿ

ಅಪ್ಪನ ಕೈಯೇ ಸೊಂಡಿಲು
ಆನೆಗೆ ನೋಡಿ ನಾಲ್ಕಾಲು
ಬೇರೆ ಸೀಟು ನಿಮಗಿಲ್ಲ
ನಿಂತು ನೋಡಿ ನೀವೆಲ್ಲ

ಅಮ್ಮ ನೋಡಿ ನಗುವಾಗ
ಚಪ್ಪಾಳೆ ತಟ್ಟಿರಿ ನೀವಾಗ
ಆನೆಗೆ ನಾನೇ ಅದಿಕಾರಿ
ಮಾಡುವೆ ನಾನೇ ಸವಾರಿ

ಮೆಲ್ಲನೆ ಸಾಗುವ ನಮ್ಮಾನೆ
ಕಬ್ಬನು ತಿಂದಿತು ಸುಮ್ಮನೆ
ಗೀಳು ಮಾತ್ರ ಬಲುಜೋರು
ತುಂಬಾ ಪ್ರೀತಿಯ ಸಾವ್ಕಾರ‍್ರು

ಎಲ್ಲರು ನಗುವರು ಕುಶಿಯಲ್ಲಿ
ಸವಾರಿ ಮಾಡಿದೆ ಮೋಜಿನಲಿ
ಗಂಟೆ ಹೊಡೆಯಿತು ಗಡಿಯಾರ
ಮುಂದಿನ ಸವಾರಿ ಸೋಮವಾರ

(ಚಿತ್ರ ಸೆಲೆ: lovepik.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: