ಬಟಾಣಿ ವಡೆ

– ಸವಿತಾ.

batani vade

ಬೇಕಾಗುವ ಸಾಮಾನುಗಳು

  • ಹಸಿ ಬಟಾಣಿ – 2 ಬಟ್ಟಲು
  • ಹಸಿ ಮೆಣಸಿನಕಾಯಿ – 4
  • ಹಸಿ ಶುಂಟಿ – ಕಾಲು ಇಂಚು
  • ಚಕ್ಕೆ – ಅರ‍್ದ ಇಂಚು
  • ಜೀರಿಗೆ – ಅರ‍್ದ ಚಮಚ
  • ಓಂ ಕಾಳು (ಅಜಿವಾಯಿನ್ ಕಾಳು) – ಕಾಲು ಇಂಚು
  • ಉಪ್ಪು ರುಚಿಗೆ ತಕ್ಕಶ್ಟು
  • ಅರಿಶಿಣ ಪುಡಿ ಸ್ವಲ್ಪ
  • ಗಜ್ಜರಿ – 1
  • ಕೊತ್ತಂಬರಿ ಸೊಪ್ಪು – ಅರ‍್ದ ಬಟ್ಟಲು
  • ಈರುಳ್ಳಿ – 1
  • ಗೋದಿ ರವೆ – 2 ಚಮಚ
  • ಕಡಲೇ ಹಿಟ್ಟು – 2 ಬಟ್ಟಲು
  • ನೀರು ಸ್ವಲ್ಪ
  • ಉಪ್ಪು ರುಚಿಗೆ ತಕ್ಕಶ್ಟು
  • ಒಣ ಕಾರದ ಪುಡಿ – 1 ಚಮಚ
  • ಅಡುಗೆ ಸೋಡಾ – ಕಾಲು ಚಮಚ
  • ಕೊತ್ತಂಬರಿ ಸೊಪ್ಪು ಸ್ವಲ್ಪ

ಮಾಡುವ ಬಗೆ

ಮೊದಲಿಗೆ ಗಜ್ಜರಿ ತುರಿ ಮಾಡಿಟ್ಟುಕೊಳ್ಳಿರಿ. ಆಮೇಲೆ ಈರುಳ್ಳಿ ಕತ್ತರಿಸಿಟ್ಟುಕೊಳ್ಳಿರಿ. ತದನಂತರ ಹಸಿ ಮೆಣಸಿನಕಾಯಿ, ಜೀರಿಗೆ, ಚಕ್ಕೆ, ಓಂ ಕಾಳು ಮತ್ತು ಹಸಿ ಬಟಾಣಿ ಸೇರಿಸಿ ಮಿಕ್ಸರ‍್‍‍ನಲ್ಲಿ ಒಂದು ಸುತ್ತು ತಿರುಗಿಸಿಟ್ಟುಕೊಳ್ಳಿ. ಕೊತ್ತಂಬರಿ ಸೊಪ್ಪು, ರವೆ, ತುರಿದ ಗಜ್ಜರಿ ಮತ್ತು ಕತ್ತರಿಸಿದ ಈರುಳ್ಳಿ ಇವುಗಳನ್ನು ಸೇರಿಸಿ ಜೊತೆಗೆ ಉಪ್ಪು, ಅರಿಶಿಣ ಪುಡಿ ಸ್ವಲ್ಪ ಹಾಕಿ ಚೆನ್ನಾಗಿ ಕಲಸಿ ಉಂಡೆ ಮಾಡಿಟ್ಟುಕೊಳ್ಳಿರಿ. ಇನ್ನೊಂದೆಡೆ ಕಡಲೆ ಹಿಟ್ಟು, ಅಡುಗೆ ಸೋಡಾ, ರುಚಿಗೆ ತಕ್ಕಶ್ಟು ಉಪ್ಪು, ಒಣ ಕಾರದ ಪುಡಿ, ಸ್ವಲ್ಪ ನೀರು ಮತ್ತು ಸ್ವಲ್ಪ ಕತ್ತರಿಸಿದ ಕೊತ್ತಂಬರಿ ಸೊಪ್ಪು ಸೇರಿಸಿ ಚೂರು ಗಟ್ಟಿ ಹಿಟ್ಟು ಕಲಸಿಟ್ಟುಕೊಳ್ಳಿ. ಈಗ ಈ ಮೊದಲಿಗೆ ಮಾಡಿಟ್ಟುಕೊಂಡ ಉಂಡೆಗಳನ್ನು ಒಂದೊಂದಾಗಿ ಕಡಲೆ ಹಿಟ್ಟಿನಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಕರೆದು ತೆಗೆಯಿರಿ. ಈಗ ಹಸಿ ಬಟಾಣಿ ವಡೆ ಸವಿಯಲು ಸಿದ್ದವಾಗಿದ್ದು, ಸಾಸ್ ಜೊತೆ ತಿನ್ನಬಹುದು.

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: