ಕವಿತೆ: ಬದ್ಕಿನಾಟ

– .

ಕಾಣ್ದ ಕೈಲಿ ಕೈಗೊಂಬೆ
ಕುಣಿತೈತೆ ಯಾರ‍್ದೊ ತುತ್ತೂರಿಲಿ
ತಕ ತೈ ತಕ ತೈ ಕುಣಿತು
ಮನ ಕಲ್ಕೋ ತನ್ಕ
ನೆಮ್ದಿಯ ಹುಡ್ಕಾಟದಲಿ

ಇದ್ದಾಗ ಇಕ್ಲಿಲ್ಲ ಹೋದಾಗ ಹೋಳ್ಗೆ
ಬದ್ಕಿದ್ದಾಗ ಅಯ್ಯೋ ಪಾಪಿ
ಸತ್ತಾಗ ಅಯ್ಯೋ ಪಾಪ
ಹೊತ್ಕೊಳಕೆ ನಾಲ್ಕೇ ನಾಲ್ಕು ಜನ
ಮಲ್ಕೋಳಕೆ ಆರಡಿ ಮೂರಡಿ ಜಾಗ
ತಿಳ್ದು ತಿಳ್ದಿದ್ದೂ ಎಲ್ಲೋ ದೂರದಲಿ ಕುಣಿತೈತೆ
ಆಂಕಾರದ ಬುದ್ದಿಯ ಗೊಂಬೆ

ಸಾಯೋ ತನ್ಕ ಸಿಕ್ಕಲ್ಲ ನೆಮ್ದಿ
ಬದ್ಕಿದ್ದಾಗ ಏನೋ ಕಾಡ್ತಿದೆ ಮನ್ದಲಿ
ಹುಡ್ಕಿದ್ರೂ ಸಿಗ್ತಿಲ್ಲ ಆ ನಾಲ್ಕೆ ನಾಲ್ಕ್ಜನ
ಅವ್ರು ನೋಡೋ ಹಾಗೆ ಬದ್ಕೋ
ಅನ್ನೋ ವೇದ ವಾಕ್ದಂಗೆ

ವಿಚಿತ್ರ ಜಗತ್ತೊಳಗ ಬದ್ಕಿನಾಟವ
ತಿಳಿಯದೆ ಕುಣಿತೈತೆ ಮನದ ಗೊಂಬೆ

(ಚಿತ್ರ ಸೆಲೆ: unsplash.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: