ಕವಿತೆ: ಶರದಿ

– .

ಮನಸು, Mind, memories, ನೆನಪು

ನಿಗೂಡ ಅಂತರಾಳದಿ ಸತ್ಯವ ಹುದುಗಿಸಿದೆ ಶರದಿ
ಬ್ರಹ್ಮಾಂಡ ಸ್ರುಶ್ಟಿಯನು ಒಡಲಾಳದಿ ಅಡಗಿಸಿದೆ ಶರದಿ

ಹವಳ ಮುತ್ತು ರತ್ನ ಮಾಣಿಕ್ಯಗಳ ನಿದಿಯಾಗಿದೆ
ಸಮುದ್ರ ಮತನ ಕಾಲದಲ್ಲಿ ಅಮ್ರುತವ ಹರಿಸಿದೆ ಶರದಿ

ಮತ್ಸ್ಯ ಕೂರ‍್ಮ ಮಕರಗಳ ಆವಾಸ ಸ್ತಾನವಿದು
ಸುನಾಮಿಯಂತ ರಕ್ಕಸ ಅಲೆಗಳನ್ನು ಸ್ರುಜಿಸಿದೆ ಶರದಿ

ನೀಲಿಯ ಗಗನದಂತೆ ಶಾಂತ ಅಲೆಯದು ತೇಲುತಿದೆ
ಕಾಲಗರ‍್ಬವು ನಿರ‍್ಬಯ ನಾವಿಕನ ಬೆಳೆಸಿದೆ ಶರದಿ

ಅಬಿನವನನು ಬವಸಮುದ್ರದ ಸುಳಿಯಲ್ಲಿ ಸಿಲುಕಿಸಿದೆ
ತ್ರಿಶಂಕು ಸ್ತಿತಿಯಲ್ಲಿ ಎಲ್ಲವನು ಮಾಯವಾಗಿಸಿದೆ ಶರದಿ

(ಚಿತ್ರಸೆಲೆ : sloanreview.mit.edu)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: