ಮೊಟ್ಟೆ ಗೊಜ್ಜು

– ವಿಜಯಮಹಾಂತೇಶ ಮುಜಗೊಂಡ.

ಏನೇನು ಬೇಕು?

  • ಮೊಟ್ಟೆ – 2
  • ಈರುಳ್ಳಿ – 2
  • ಹಸಿ ಮೆಣಸಿನಕಾಯಿ – 4
  • ಟೊಮೆಟೋ – 1
  • ಶುಂಟಿ-ಬೆಳ್ಳುಳ್ಳಿ ಪೇಸ್ಟ್ – 2 ಚಮಚ
  • ಜೀರಿಗೆ – 1 ಚಮಚ
  • ಸಾಸಿವೆ – 1 ಚಮಚ
  • ಕರಿಬೇವು – 5-6 ಎಲೆ
  • ಕೊತ್ತಂಬರಿ – ಸ್ವಲ್ಪ
  • ದನಿಯ ಪುಡಿ/ಗರಂ ಮಸಾಲೆ – 2 ಚಮಚ
  • ಎಣ್ಣೆ – 2 ಚಮಚ
  • ಅರಿಶಿಣ ಪುಡಿ – 1 ಚಿಟಿಕೆ
  • ಉಪ್ಪು – ರುಚಿಗೆ ತಕ್ಕಶ್ಟು

ಮಾಡುವುದು ಹೇಗೆ?

ಮೊದಲು ಮೊಟ್ಟೆಯನ್ನು ಕುದಿಸಿ, ತಣ್ಣಗಾದ ಬಳಿಕ ಮೊಟ್ಟೆಯ ಹಳದಿಯನ್ನು ಬೇರೆ ತೆಗೆದಿಟ್ಟುಕೊಂಡು, ಬಿಳಿ ಬಾಗವನ್ನು ಸಣ್ಣಗೆ ಕತ್ತರಿಸಿ ಇಟ್ಟುಕೊಳ್ಳಿ. ಈರುಳ್ಳಿ ಮತ್ತು ಟೊಮೆಟೋ ಅನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಹಸಿ ಮೆಣಸಿಕಾಯಿಯನ್ನು ಸಣ್ಣಗೆ ಕತ್ತರಿಸಿಕೊಳ್ಳಿ.

ಒಂದು ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆ ಹಾಕಿ ಬಿಸಿಮಾಡಿ. ಎಣ್ಣೆ ಕಾದ ಬಳಿಕ ಜೀರಿಗೆ, ಸಾಸಿವೆ, ಕರಿಬೇವು, ಹಸಿ ಮೆಣಸಿನಕಾಯಿ, ಈರುಳ್ಳಿ, ಶುಂಟಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹುರಿಯಿರಿ. ಈರುಳ್ಳಿ ಬೆಂದ ಬಳಿಕ ಟೊಮೆಟೋ, ಚಿಟಿಕೆ ಅರಿಶಿಣ, ಗರಂ ಮಸಾಲೆ, ಉಪ್ಪು ಸೇರಿಸಿ ಕಲಕಿ 2-3 ನಿಮಿಶಿ ಚೆನ್ನಾಗಿ ಬೇಯಿಸಿ. ಮೊಟ್ಟೆಯ ಹಳದಿ ಬಾಗಕ್ಕೆ ಸ್ವಲ್ಪ ನೀರು ಸೇರಿಸಿ ಒಗ್ಗರಣೆಗೆ ಹಾಕಿ ಕಲಸಿ. ಒಂದು ನಿಮಿಶದ ನಂತರ ಕತ್ತರಿಸಿದ ಮೊಟ್ಟೆಯನ್ನು ಸೇರಿಸಿ ಕಲಸಿ. ಬೇಕೆನಿಸಿದರೆ ಸ್ವಲ್ಪ ನೀರು ಸೇರಿಸಿ ಉರಿ ಕಡಿಮೆ ಮಾಡಿ 10 ನಿಮಿಶ ಬೇಯಲು ಬಿಡಿ. ಚೆನ್ನಾಗಿ ಬೆಂದ ಮೇಲೆ ಕೊತ್ತಂಬರಿ ಸೊಪ್ಪು ಸೇರಿಸಿ ಕಲಸಿ. ಈಗ ಮೊಟ್ಟೆ ಗೊಜ್ಜು ಸವಿಯಲು ತಯಾರಿದೆ. ಅನ್ನ, ಚಪಾತಿ ಇಲ್ಲವೇ ಪೂರಿಯೊಂದಿಗೆ ಚಪ್ಪರಿಸಬಹುದು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: