ಕವಿತೆ: ನಿನ್ನ ಪ್ರೀತಿ

– ವಿನು ರವಿ.

ಒಲವು, love

ಬಿರುಬಿಸಿಲ ಬೇಗೆಯಲಿ
ಹೊಂಗೆ ನೆರಳ ತಂಪು
ನಿನ್ನ ಪ್ರೀತಿ..

ಬಾಡಿ ಹೋದ ಬಳ್ಳಿಯಲಿ
ತುಂಬಿ ನಿಂತ ಹೂವು
ನಿನ್ನ ಪ್ರೀತಿ..

ಉಕ್ಕಿ ಮೊರೆವ ಸಾಗರದಲಿ
ಹೆಕ್ಕಿ ತೆಗೆದ ಮುತ್ತು
ನಿನ್ನ ಪ್ರೀತಿ..

ಜಡವಾದ ಬದುಕಿನಲಿ
ನವ ಚೈತನ್ಯದ ದುಂಬಿ
ನಿನ್ನ ಪ್ರೀತಿ..

( ಚಿತ್ರಸೆಲೆ: pexels.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: