ಬೇಸಿಗೆ ಬಿಸಿಲಿಗೆ ತಂಪಾದ ಜೋಳದ ಅಂಬಲಿ

– ರೂಪಾ ಪಾಟೀಲ್.

ಬೇಕಾಗುವ ಸಾಮಾನುಗಳು

5 ರಿಂದ 6 ಚಮಚ ಜೋಳದ ಹಿಟ್ಟು
1/2 ಲೀಟರ್ ನೀರು
1/2 ಲೀಟರ್ ಮಜ್ಜಿಗೆ
ಹಸಿ ಶುಂಟಿ
ಬೆಳ್ಳುಳ್ಳಿ
ಜೀರಿಗೆ
ಉಪ್ಪು

ಮಾಡುವ ಬಗೆ

ಜೋಳದ ಹಿಟ್ಟು, ಸ್ವಲ್ಪ ನೀರು ಮತ್ತು ಮಜ್ಜಿಗೆ ಹಾಕಿ ಮಿಶ್ರಣ ಮಾಡಿಕೊಳ್ಳಿ. ನಂತರ ಗ್ಯಾಸ್ ಸ್ಟೌವ್ ಮೇಲೆ ದಪ್ಪ ತಳದ ಪಾತ್ರೆಯಲ್ಲಿ ನೀರು, ರುಚಿಗೆ ತಕ್ಕಶ್ಟು ಉಪ್ಪು ಮತ್ತು ಜೋಳದ ಹಿಟ್ಟಿನ ಮಿಶ್ರಣವನ್ನು ಸೇರಿಸಿ ಚೆನ್ನಾಗಿ (10 ನಿಮಿಶ) ಕುದಿಸಿರಿ. ಕೊನೆಯದಾಗಿ ಇದಕ್ಕೆ ಬೆಳ್ಳುಳ್ಳಿ, ಹಸಿಶುಂಟಿ, ಜೀರಿಗೆ ಜಜ್ಜಿ ಸೇರಿಸಿಕೊಂಡು ಸ್ವಲ್ಪ ಕುದಿಸಿ ಕೆಳಗಿಳಿಸಿ ಇಟ್ಟುಕೊಳ್ಳಿ. ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಇದನ್ನು ಸವಿಯಬಹುದು

(ಚಿತ್ರ ಸೆಲೆ: prajavani.net)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks