ಕವಿತೆ: ಒಲವ …

– .

 

ಬರಡೆದೆಯೊಳಗೆ
ಒಲವ ಮಳೆಯ ಸುರಿಸಿರುವೆ
ಕೊರಡೆದೆಯೊಳಗೆ
ಒಲವ ಗಂದವ ತೇಯ್ದಿರುವೆ

ಮರುಬೂಮಿಯೆದೆಯೊಳಗೆ
ಒಲವ ಸಿಂದುವಾಗಿ ಹರಿದಿರುವೆ
ಮುಳ್ಳಿನೆದೆಯೊಳಗೆ
ಒಲವ ಹೂವಾಗಿ ಅರಳಿರುವೆ

ಏಕಾಂಗಿಯೆದೆಯೊಳಗೆ
ಒಲವ ಜ್ಯೋತಿಯ ಬೆಳಗಿರುವೆ
ಹುಸಿಯೆದೆಯೊಳಗೆ
ಒಲವ ಸತ್ಯದರ‍್ಶನ ಮಾಡಿಸಿರುವೆ

ಕಟುಕನೆದೆಯೊಳಗೆ
ಒಲವ ಕರುಣೆಯ ಮೂಡಿಸಿರುವೆ
ಸಿಡುಕನೆದೆಯೊಳಗೆ
ಒಲವ ಮಮತೆಯ ಎಚ್ಚರಿಸಿರುವೆ

ಸೋತವನೆದೆಯೊಳಗೆ
ಒಲವ ಗೆಲುವ ಕದವ ತಟ್ಟಿರುವೆ
ಹತಾಶೆಯೆದೆಯೊಳಗೆ
ಒಲವ ಚೇತನ ಶಿವನಲ್ಲಿ ತುಂಬಿರುವೆ.

( ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: