ಮಕ್ಕಳ ಕವಿತೆ: ದುಶ್ಟರಿಂದ ದೂರವಿರು

– ವೆಂಕಟೇಶ ಚಾಗಿ.

ಹತ್ತು ಹತ್ತು ಇಪ್ಪತ್ತು
ಕಾಡಲಿ ಒಂದು ಮೊಲವಿತ್ತು

ಇಪ್ಪತ್ತು ಹತ್ತು ಮೂವತ್ತು
ಮೊಲಕೆ ಆಹಾರ ಬೇಕಿತ್ತು

ಮೂವತ್ತು ಹತ್ತು ನಲವತ್ತು
ನರಿಯ ಸ್ನೇಹ ಬೆಳೆಸಿತ್ತು

ನಲವತ್ತು ಹತ್ತು ಐವತ್ತು
ಗಜ್ಜರಿ ನರಿಯ ಮನೇಲಿತ್ತು

ಅರವತ್ತು ಹತ್ತು ಎಪ್ಪತ್ತು
ತಿನ್ನಲು ಗಜ್ಜರಿ ಕೇಳಿತ್ತು

ಎಪ್ಪತ್ತು ಹತ್ತು ಎಂಬತ್ತು
ನರಿಗೆ ಮೊಲವು ಬೇಕಿತ್ತು

ಎಂಬತ್ತು ಹತ್ತು ತೊಂಬತ್ತು
ನರಿಯು ಮೊಲವನು ತಿಂದಿತ್ತು

ತೊಂಬತ್ತು ಹತ್ತು ನೂರು
ದುಶ್ಟರಿಂದ ದೂರವಿರು

(ಕವಿತೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: