ಕವಿತೆ: ನಿನ್ನೊಲವು ಬರೆದ ಕವಿತೆಯಲಿ…

– ವಿನು ರವಿ.

ಬರಿಯ ಬಿದಿರು ನಾನು
ನಾದ ತುಂಬಿ ಕೊಳಲಾಗಿಸುವೆಯಾ ನೀನು

ಅರ‍್ತವಿಲ್ಲದ ಪದ ನಾನು
ಬಾವ ತುಂಬಿ ಹಾಡಾಗಿಸುವೆಯಾ ನೀನು

ಬಣ್ಣವಿಲ್ಲದ ಬಾನು ನಾನು
ನೀಲವರ‍್ಣವಾಗಿ ಆವರಿಸುವೆಯಾ ನೀನು

ಬರಡಾದ ನೆಲ ನಾನು
ಮಳೆಯಾಗಿ ಸುರಿದು ಸಾರವಾಗುವೆಯಾ ನೀನು

ನಿನ್ನೊಲವು ಬರೆದ ಕವಿತೆಯಲಿ
ಬರಿಯ ಕಲ್ಪನೆಯ ಚಿತ್ರವಾಗಿ ಉಳಿದೆ ನಾನು

(ಚಿತ್ರ ಸೆಲೆ: pxhere.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: