ಬೀಟ್‌ರೂಟ್ ಪಚಡಿ

– ಸವಿತಾ.

ಬೇಕಾಗುವ ಸಾಮಾನುಗಳು

ಬೀಟ್‌ರೂಟ್ – 1
ಹಸಿ ಕೊಬ್ಬರಿ – ಕಾಲು ಬಟ್ಟಲು
ಮೊಸರು – 1/2 ಕಪ್
ಜೀರಿಗೆ – 1/2 ಚಮಚ
ಹಸಿ ಮೆಣಸಿನ ಕಾಯಿ – 2
ಒಣ ಮೆಣಸಿನ ಕಾಯಿ – 1
ಕೊತ್ತಂಬರಿ ಸೊಪ್ಪು – ಸ್ವಲ್ಪ
ತುಪ್ಪ ಇಲ್ಲವೇ ಕೊಬ್ಬರಿ ಎಣ್ಣೆ – 1 ಚಮಚ
ಸಾಸಿವೆ – 1/2 ಚಮಚ
ಉಪ್ಪು ರುಚಿಗೆ ತಕ್ಕಶ್ಟು
ಅರಿಶಿಣ ಪುಡಿ ಸ್ವಲ್ಪ

ಮಾಡುವ ಬಗೆ

ಬೀಟ್‌ರೂಟ್ ಸಿಪ್ಪೆ ತೆಗೆದು ಸಣ್ಣಗೆ ಕತ್ತರಿಸಿ ಅರ‍್ದ ಲೋಟ ನೀರು ಹಾಕಿ ಕುದಿಯಲು ಇಡಬೇಕು. ಹಸಿ ಕೊಬ್ಬರಿ ತುರಿ ಮಾಡಿ ಕೊಂಡು ಹಸಿ ಮೆಣಸಿನ ಕಾಯಿ, ಜೀರಿಗೆ, ಸ್ವಲ್ಪ ಉಪ್ಪು ಸೇರಿಸಿ ಒಂದು ಸುತ್ತು ಮಿಕ್ಸರ‍್ ನಲ್ಲಿ ರುಬ್ಬಿ ಕುದಿಯುವ ಬೀಟ್‌ರೂಟ್ ಗೆ ಸೇರಿಸಿ. ಸ್ವಲ್ಪ ನೀರು ಸೇರಿಸಿ ಒಂದು ಕುದಿ ಕುದಿಸಿ ಇಳಿಸಿ.

ಒಂದು ಬಾಣಲೆಗೆ ತುಪ್ಪ ಹಾಕಿ ಬಿಸಿ ಮಾಡಿ ಸಾಸಿವೆ, ಒಣ ಮೆಣಸಿನ ಕಾಯಿ, ರುಚಿಗೆ ತಕ್ಕಶ್ಟು ಉಪ್ಪು ಮತ್ತು ಚಿಟಿಕೆ ಅರಿಶಿಣ ಪುಡಿ ಹಾಕಿ ಒಗ್ಗರಣೆ ಮಾಡಿ, ಒಲೆ ಆರಿಸಿ ಇಳಿಸಿ. ಆರಿದ ನಂತರ ಒಗ್ಗರಣೆಗೆ, ಕುದಿಸಿಟ್ಟ ಬೀಟ್‌ರೂಟ್ ಮಿಶ್ರಣ ಮತ್ತು ಮೊಸರು ಸೇರಿಸಿ. ಕತ್ತರಿಸಿದ ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಕಲಸಿ. ಈಗ ಬೀಟ್‌ರೂಟ್ ಪಚಡಿ ಅನ್ನ, ಚಪಾತಿ ಜೊತೆ ಸೈಡ್ ಡಿಶ್ ಆಗಿ ಸವಿಯಲು ಸಿದ್ದ.

ಇದನ್ನು ಹೆಚ್ಚಾಗಿ ತಮಿಳುನಾಡಿನ ಜನರು ಮಾಡುತ್ತಾರೆ. ಅವರು ಕೊಬ್ಬರಿ ಎಣ್ಣೆ ಬಳಸುತ್ತಾರೆ. ಪಚಡಿ ಮಾಡಲು ಕೊಬ್ಬರಿ ಎಣ್ಣೆ ಅತವಾ ತುಪ್ಪ ಬಳಸಬಹುದು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: