ಕವಿತೆ: ಜೀವನ ಪಯಣ

– ಶ್ಯಾಮಲಶ್ರೀ.ಕೆ.ಎಸ್.

ಜೀವನ. ಬದುಕು, ಬಂಡಿ, ಜೀವನಜಕ್ರ, life,

ಜನನಕ್ಕೊಂದು ಊರು
ಮರಣಕ್ಕೊಂದು ಸೂರು
ನಡುವೆಯಿದೆ ಜೀವನ ಯಾನ
ಸಾಗುತಿಹುದು ಬಾಳಿನ ಪಯಣ

ಬದುಕಿಗಾಗಿ ನಿತ್ಯ ಹೋರಾಟ
ದಿನವೂ ಹಾರಾಟ ಪರದಾಟ
ಎಲ್ಲರಿಗೂ ಒಂದೇ ಮುನ್ನುಡಿ
ಬಿನ್ನ ಬಿನ್ನ ಚರಿತ್ರೆಯ ಕೈಪಿಡಿ

ಬಯಸುವುದೊಂದು
ನಡೆಯುವುದೊಂದು
ಪಾಲಿಸಬೇಕಿದೆ ಹೊಂದಾಣಿಕೆಯ ಸೂತ್ರ
ಸಿಗಬಹುದೇನೋ ಮನಕೆ ಸಮಾದಾನದ ಪತ್ರ

ಗಳಿಗೆ ಗಳಿಗೆಗೂ ಈ ಬಾವಗಳದ್ದೇ ಗದ್ದಲ
ಸಮಯದ ಹಿಡಿಯಲ್ಲಿದೆ ಬಿಡಿಸಲು ಎಲ್ಲಾ ಗೊಂದಲ
ಆದರೂ ಪ್ರಯಾಣ ಮುಂದುವರೆದಿದೆ
ಆಶಯವ ಬಿಡದೇ ಬಚ್ಚಿಟ್ಟು ನಡೆದಿದೆ

ಬದುಕು ಅಂತಿಮ ನಿಲ್ದಾಣವ ತಲುಪಿದೆ
ಬೂತಾಯಿಯ ಮಡಿಲ ಸೇರಿದೆ
ಪಡೆದಿದ್ದೆಶ್ಟೋ ಕಳೆದಿದ್ದೆಶ್ಟೋ ಬಾಳಲ್ಲಿ
ದುಕ್ಕವೊಂದೇ ಜೊತೆಯಾಗಿದೆ ಕೊನೆಯಲ್ಲಿ

(ಚಿತ್ರ ಸೆಲೆ: geeflix.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: