ಕವಿತೆ: ದೇವರಿಗೊಂದು ಮನವಿ

– ಚಂದ್ರಮತಿ ಪುರುಶೋತ್ತಮ್ ಬಟ್.

 

ಹುಟ್ಟಿದಾಗ ಅಳುತ್ತಾ ಅಳುತ್ತಾ
ಒಂದೂ ತಿಳಿಯಲಿಲ್ಲ ನಾನು ಯಾರು ಹೇಗೆ ಬಂದೆ ಎಂದು

ಬೆಳೆಯುತ್ತಾ ಬೆಳೆಯುತ್ತಾ
ಅಂದುಕೊಂಡೆ ನಾನೇ ಈ ಜಗತ್ತಿನಲ್ಲಿ ಸುಂದರವೆಂದು

ನಗುತ್ತಾ ನಗುತ್ತಾ
ಪ್ರೀತಿಸ ತೊಡಗಿದೆ ಎಲ್ಲವೂ ಎಲ್ಲರೂ ನಮ್ಮವರೆಂದು

ಬರುತ್ತಾ ಬರುತ್ತಾ
ತಿಳಿದುಕೊಂಡೆ ನನ್ನ ನಾನೆಂದೂ ಪ್ರೀತಿಸಿ ಕೊಳ್ಳಲೇ ಇಲ್ಲವೆಂದು

ಕಳೆಯುತ್ತಾ ಕಳೆಯುತ್ತಾ
ಬಯಸ ತೊಡಗಿದೆ ಸಮಾಜಕ್ಕೆ ನಾನೇನಾದರೂ ಕೊಡಬೇಕೆಂದು

ಮನವಿ ಸಲ್ಲಿಸುತ್ತಾ ಸಲ್ಲಿಸುತ್ತಾ
ಬೇಡಿಕೊಂಡೆ ಸತ್ಕಾರ‍್ಯ ಮಾಡಲು ವಿಶಾಲ ಹ್ರುದಯ ನೀಡೆಂದು

(ಚಿತ್ರಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Sharangouda Patil says:

    ಸುಪರ್ಬ್ ✍️????ಚಂದ ಬರೆದಿದ್ದೀರಿ.

ಅನಿಸಿಕೆ ಬರೆಯಿರಿ: