ಗಜ್ಜರಿ ಸೂಪ್

– ಸವಿತಾ.

ಬೇಕಾಗುವ ಸಾಮಾನುಗಳು

ಗಜ್ಜರಿ (ಕ್ಯಾರೆಟ್ ) – 3
ಕಾರ‍್ನ್ ಪ್ಲೋರ್ – 2 ಚಮಚ
ಬೆಳ್ಳುಳ್ಳಿ ಎಸಳು – 4
ಹಸಿ ಮೆಣಸಿನ ಕಾಯಿ – 1
ಒಣ ಕಾರದ ಪುಡಿ – 1/2 ಚಮಚ
ಹಸಿ ಶುಂಟಿ ಸ್ವಲ್ಪ
ಬೆಣ್ಣೆ ಅತವಾ ತುಪ್ಪ – 1 ಚಮಚ
ಕರಿಮೆಣಸಿನ ಕಾಳು – 4
ಏಲಕ್ಕಿ – 1
ನಿಂಬೆ ಹಣ್ಣು – 1
ಸಕ್ಕರೆ – 1 ಚಮಚ
ಉಪ್ಪು ರುಚಿಗೆ ತಕ್ಕಶ್ಟು

ಮಾಡುವ ವಿದಾನ

ಗಜ್ಜರಿ ಸಿಪ್ಪೆ ತೆಗೆದು ಕುದಿಸಿ, ನಂತರ ಮಿಕ್ಸರ್ ನಲ್ಲಿ ರುಬ್ಬಿಕೊಳ್ಳಿ. ಬಾಣಲೆಗೆ ತುಪ್ಪ ಹಾಕಿ, ಹಸಿ ಮೆಣಸಿನ ಕಾಯಿ, ಹಸಿ ಶುಂಟಿ, ಬೆಳ್ಳುಳ್ಳಿ ಎಸಳು ಕಲ್ಲಿನಲ್ಲಿ ಅರೆದು ಹಾಕಿ. ರುಬ್ಬಿದ ಗಜ್ಜರಿ ಮತ್ತು ಕಾರ‍್ನ್ ಪ್ಲೋರ್ ಹಿಟ್ಟು ನೀರಿನಲ್ಲಿ ಕಲಸಿ ಹಾಕಿರಿ. ಕರಿಮೆಣಸಿನ ಪುಡಿ, ಏಲಕ್ಕಿ ಪುಡಿ ಮಾಡಿ ಹಾಕಿ. ಬಣ್ಣ ಬರಲಿಕ್ಕೆ ಸ್ವಲ್ಪ ಕೆಂಪು ಒಣ ಕಾರದ ಪುಡಿ ಹಾಕಿರಿ. (ಬೇಡವಾದರೆ ಬರೀ ಹಸಿ ಮೆಣಸಿನ ಕಾಯಿ ಹಾಕಬಹುದು) ನಿಂಬೆ ಹಣ್ಣಿನ ರಸ ನೀರು ಸೇರಿಸಿ ಹಾಕಿ ಸಕ್ಕರೆ, ಉಪ್ಪು ರುಚಿಗೆ ತಕ್ಕ ಶ್ಟು ಹಾಕಿ ಒಂದು ಕುದಿ ಕುದಿಸಿ ಇಳಿಸಿ. ಈಗ ಬಿಸಿ ಬಿಸಿ ಗಜ್ಜರಿ ಸೂಪ್ ತಯಾರಾಯಿತು. ಬೇಕಾದರೆ ಮೇಲೆ ಸ್ವಲ್ಪ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: