ಕವಿತೆ: ಪೆಡರರ್ ಎಂಬ ಮಾಯಾವಿ!

 ರಾಮಚಂದ್ರ ಮಹಾರುದ್ರಪ್ಪ.

ರೋಜರ್, ನೀ ಟೆನ್ನಿಸ್ ನ ಮಿಂಚು
ನಿನ್ನ ರಾಕೆಟ್ ನಿಂದ ಆಟವನ್ನು ಬೆಳಗಿದೆ!
ಕೋಟ್ಯಂತರ ಜನರನ್ನ ಟೆನ್ನಿಸ್ ನತ್ತ ಸೆಳೆದೆ
ಗೆಲುವುಗಳ ಮೇಲೆ ಗೆಲುವುಗಳ
ಗೋಪುರ ಕಟ್ಟುತ್ತಾ ಹೋದೆ!

ನಿನ್ನ ಅಪ್ಪಟ ಗುಣದಿಂದ,
ದೇಶ ಬಾಶೆಗಳನ್ನೂ ಮೀರಿ
ಜನರ ಪ್ರೀತಿ ಗಳಿಸಿದೆ
ಇವ ನಮ್ಮವ ಎಂದಿತು ಪ್ರಪಂಚ!

ಆದರೂ ಯಶಸ್ಸು ನಿನ್ನ ತಲೆಗೇರಲಿಲ್ಲ
ಕಲಿಯುವ ಹುಡುಗನಂತೆ
ಶಿಸ್ತಿನ ಸಿಪಾಯಿಯಂತೆ
ಆಟವನ್ನು ಸದಾ ಗೌರವಿಸಿದೆ

ಕಡೆಗೆ ಎಲ್ಲೆಡೆ ಗೆದ್ದ ಮೇಲೆ,
ಈಗ ವಯಸ್ಸಾಯ್ತು, ದಣಿದಿರುವೆ
ಕಾಲಲ್ಲಿ ಕಸುವಿಲ್ಲ ಎಂಬ ನೆಪ ಹೇಳಿ
ಇನ್ನು ಆಡಲೊಲ್ಲೆ, ಆಡಲಾರೆ
ಎಂದು ನೀ ದೂರ ಸರಿದೆ!

ಇದು ನ್ಯಾಯವೇ, ರೋಜರ್?
ರೋಜರ್ ಇಲ್ಲದ ಟೆನ್ನಿಸ್ ಕೋರ‍್ಟ್
ಬೆಳೆಯಿಲ್ಲದ ಹೊಲದಂತೆ!
ಬರಿ ಬರಡು-ಬರಡು

ಏನಂತ ನೋಡುವುದು ಇನ್ನು?
ಆದರೂ ಆಟ ನಡೆಯಲಿದೆ
ನಿನ್ನ ನೆನಪುಗಳು ಕಾಡಲಿವೆ!
ನೀನೊಬ್ಬ ರಾಕೆಟ್ ಹಿಡಿದ ಮಾಯಾವಿ
ನಿನ್ನ ಆಟದ ಸಿಹಿಯ ಸವೆದ ನಾವೇ ದನ್ಯರು!

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: