ಸೊಪ್ಪಿನ ಸಾರು

– ನಿತಿನ್ ಗೌಡ.

ಬೇಕಾಗುವ ಸಾಮಾನುಗಳು

 • ಎಳೆ ಹರಬೆ – 6-7 ಕಟ್ಟು
 • ಪಾಲಕ್ ಸೊಪ್ಪು – 1 ಕಟ್ಟು
 • ಮೆಂತೆ ಸೊಪ್ಪು – 1 ಕಟ್ಟು
 • ಈರುಳ್ಳಿ – 2
 • ಟೋಮೋಟೋ – 2-3
 • ಹಸಿಮೆಣಸು – 5
 • ಅರಿಶಿಣ – ಸ್ವಲ್ಪ
 • ಕಾರದ ಪುಡಿ – 2-3 ಚಮಚ
 • ಬೆಳ್ಳುಳ್ಳಿ – 10-12 ಎಸಳು
 • ಕರಿಬೇವು – ಸ್ವಲ್ಪ
 • ಸಾಸಿವೆ – ಸ್ವಲ್ಪ
 • ಎಣ್ಣೆ -ಸ್ವಲ್ಪ ( ಒಗ್ಗರಣೆಗೆ )
 • ಉಪ್ಪು – ರುಚಿಗೆ ತಕ್ಕಶ್ಟು
 • ತೆಂಗಿನ ಕಾಯಿ – ಅರ‍್ದ ಹೊಳಕೆ
 • ಶುಂಟಿ – 1 ಇಂಚು
 • ಸಾರಿನ ಪುಡಿ – 2-3 ಚಮಚ
 • ಕೊತ್ತಂಬರಿ ಕಟ್ಟು – ಕಾಲು ಕಟ್ಟು
 • ದನಿಯಾ ಪುಡಿ – ಅರ‍್ದ ಚಮಚ

ಮಾಡುವ ಬಗೆ

ಮೊದಲಿಗೆ ಎಲ್ಲಾ ಸೊಪ್ಪಿನ ಕಟ್ಟುಗಳನ್ನು ಚೆನ್ನಾಗಿ ತೊಳೆದು, ಸೋಸಿ, ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಿರಿ. ಅಮೇಲೆ ಅರ‍್ದ ಹೊಳಕೆ ಕಾಯಿ ತುರಿ, ಒಂದೂ ವರೆ ಈರುಳ್ಳಿ, ಎರಡು ಟೋಮೋಟೋ, ಮೂರು ಹಸಿಮೆಣಸು, ಸ್ವಲ್ಪ ಅರಿಶಿಣ, 8 ಎಸಳು ಬೆಳ್ಳುಳ್ಳಿ, ಶುಂಟಿ, ಕೊತ್ತಂಬರಿ, ಸಾರಿನ ಪುಡಿ, ದನಿಯಾ ಪುಡಿ, ನೀರು ಮತ್ತು ಕಾರದ ಪುಡಿ ಇಶ್ಟನ್ನೂ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿರಿ. ಆಮೇಲೆ ಪಾತ್ರೆಗೆ ಸ್ವಲ್ಪ ಎಣ್ಣೆಹಾಕಿ, ಸಾಸಿವೆ, ಕರಿಬೇವು, ಜಜ್ಜಿಟ್ಟುಕೊಂಡ ಬೆಳ್ಳುಳ್ಳಿ, ಉಳಿದ ಈರುಳ್ಳಿ ಹಾಕಿ ಒಗ್ಗರಣೆ ಮಾಡಿಕೊಳ್ಳಿರಿ. ಈಗ ಇದಕ್ಕೆ ಹಸಿಮೆಣಸು, ಅರಿಶಿಣ ಮತ್ತು ಉಪ್ಪನ್ನು ಹಾಕಿರಿ. ಈಗ ಇದಕ್ಕೆ ರುಬ್ಬಿಟ್ಟುಕೊಂಡದ್ದನ್ನು ಹಾಕಿ, ಅದರ ಹಸಿ ಗಮ ಹೋಗುವ ವರೆಗೆ ಹುರಿಯಿರಿ. ಆಮೇಲೆ ಇದಕ್ಕೆ ಉಳಿದ ಚೂರು ಟೋಮೋಟೋ. ಆಮೇಲೆ ಇದಕ್ಕೆ ಹೆಚ್ಚಿಟ್ಟುಕೊಂಡ ಸೊಪ್ಪನ್ನು ಹಾಕಿ, ಸ್ವಲ್ಪ ನೀರನ್ನು ಹಾಕಿ, ಒಂದಿಪ್ಪತ್ತು ನಿಮಿಶ ಮುಚ್ಚಳ ಮುಚ್ಚಿಟ್ಟು ಬೇಯಿಸಿ. ಆಗಾಗ ಸಾರನ್ನು ಸವಟಿನಿಂದ ಅಲ್ಲಾಡಿಸಿ. ಬೇಕಾದ್ದಲ್ಲಿ ಉಪ್ಪನ್ನು ಹಾಕಿಕೊಳ್ಳಬಹುದು. ಈಗ ಸೊಪ್ಪಿನ ಸಾರು ತಯಾರಿದ್ದು, ರಾಗಿ ಮುದ್ದೆ ಜೊತೆ, ಅಕ್ಕಿ ರೊಟ್ಟಿ ಜೊತೆ ತಿನ್ನಲು ಚೆನ್ನಾಗಿರುತ್ತದೆ.

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: