ಸೊಪ್ಪಿನ ಪಲ್ಯೆ

– ನಿತಿನ್ ಗೌಡ.

ಬೇಕಾಗುವ ಸಾಮಾನುಗಳು

  • ಎಳೆ ಹರಬೆ – 5-6 ಕಟ್ಟು
  • ಪಾಲಕ್ – 1 ಕಟ್ಟು
  • ಮೆಂತೆ – 1 ಕಟ್ಟು
  • ಈರುಳ್ಳಿ – 2
  • ಟೋಮೋಟೋ – 2-3
  • ಹಸಿಮೆಣಸು – 5
  • ಅರಿಶಿಣ – ಸ್ವಲ್ಪ
  • ಕಾರದ ಪುಡಿ – 3-4 ಚಮಚ
  • ಬೆಳ್ಳುಳ್ಳಿ – 10-12 ಎಸಳು
  • ಕರಿಬೇವು – ಸ್ವಲ್ಪ
  • ಸಾಸಿವೆ – ಸ್ವಲ್ಪ
  • ಎಣ್ಣೆ -ಸ್ವಲ್ಪ (ಒಗ್ಗರಣೆಗೆ)
  • ಉಪ್ಪು – ರುಚಿಗೆ ತಕ್ಕಶ್ಟು

ಮಾಡುವ ಬಗೆ

ಮೊದಲಿಗೆ ಎಲ್ಲಾ ಸೊಪ್ಪಿನ ಕಟ್ಟುಗಳನ್ನು ಚೆನ್ನಾಗಿ ತೊಳೆದು, ಸೋಸಿ, ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಿರಿ. ಆಮೇಲೆ ಪಾತ್ರೆಗೆ ಸ್ವಲ್ಪ ಎಣ್ಣೆಹಾಕಿ, ಸಾಸಿವೆ, ಕರಿಬೇವು, ಜಜ್ಜಿಟ್ಟುಕೊಂಡ ಬೆಳ್ಳುಳ್ಳಿ, ಈರುಳ್ಳಿ ಹಾಕಿ ಒಗ್ಗರಣೆ ಮಾಡಿಕೊಳ್ಳಿರಿ. ಈಗ ಇದಕ್ಕೆ ಹಸಿಮೆಣಸು ಆಮೇಲೆ ಟೋಮೋಟೋ ಹಾಕಿ. ಈಗ ಇದಕ್ಕೆ ಅರಿಶಿಣ, ಉಪ್ಪನ್ನು ಹಾಕಿರಿ. ಸ್ವಲ್ಪ ಹೊತ್ತು ಟೋಮೋಟೋ ಕರಗಿದ ಮೇಲೆ , ಕಾರದ ಪುಡಿ ಹಾಕಿ. ಆಮೇಲೆ ಇದಕ್ಕೆ ಹೆಚ್ಚಿಟ್ಟುಕೊಂಡ ಸೊಪ್ಪನ್ನು ಹಾಕಿ, ಸ್ವಲ್ಪ ನೀರನ್ನು ಹಾಕಿ, ಒಂದಿಪ್ಪತ್ತು ನಿಮಿಶ ಬೇಯಿಸಿ. ಆಗಾಗ ಪಲ್ಯವನ್ನು ಸವಟಿನಿಂದ ಅಲ್ಲಾಡಿಸಿ. ಬೇಕಾದ್ದಲ್ಲಿ ಉಪ್ಪನ್ನು ಹಾಕಿಕೊಳ್ಳಬಹುದು. ಈಗ ಸೊಪ್ಪಿನ ಪಲ್ಯ ತಯಾರಿದ್ದು, ಹುಡಿ ಅನ್ನದ ಜೊತೆಗೆ ಇಲ್ಲವೇ ಅಕ್ಕಿರೊಟ್ಟಿ, ದೋಸೆ, ಚಪಾತಿ ಜೊತೆ ತಿನ್ನಲು ಚೆನ್ನಾಗಿರುತ್ತದೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: