ಹನಿಗವನಗಳು

– ವೆಂಕಟೇಶ ಚಾಗಿ.

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

*** ದಿಕ್ಕು ***

ಅವನು ಆ ದಿಕ್ಕು
ಅವಳು ಮತ್ತೊಂದು ದಿಕ್ಕು
ಏನಿರಬಹುದು ಕಾರಣ
ಕಾರಣ?
ರಾಜಕಾರಣ!

*** ಸೈಟು ***

ಅನ್ನ ಬೆಳೆಯುವ
ಬೂಮಿಯನ್ನೇಕೆ
ಮಾಡುವಿರಿ ಸೈಟು
ಮುಂದೆ ನಡೆದೀತು
ನಮಗೂ ನಿಮಗೂ
ಅನ್ನಕ್ಕಾಗಿ ಪೈಟು

***  ಕೂಸು ***

ರಮಿಸುವ ಕಲೆ
ಗೊತ್ತಿಲ್ಲ ಈಗಿನವರಿಗೆ
ಕೂಸು ಅತ್ರೆ
ಏನೋ ಆಗಿರಬುದು
ಎಂದು ಕಾಣುತ್ತಾರೆ
ಹಾದಿಬೀದಿಯ ಆಸ್ಪತ್ರೆ

*** ಗಾಳಿ ***

ನಗರಗಳಲ್ಲಿ
ಸಿಗುತ್ತಲೇ ಇಲ್ಲ
ಪರಿಶುದ್ದ ಗಾಳಿ
ಕಲಿತವರಿದ್ದರೂ
ಸ್ವಲ್ಪವೂ ತಿಳಿದಿಲ್ಲ
ಪರಿಸರದ ಕಳಕಳಿ

*** ಮದ್ದು ***

ಯಾವುದೇ ಕಾಯಿಲೆ ಬರಲಿ
ವಾಸಿಯಾಗಲು ಇದೆ
ರೆಡಿಮೇಡ್ ಮದ್ದು
ಕಾಯಿಲೆ ಬರದೇ ಇರಲು
ನಗಲೇಬೇಕು
ನಗುವಾಗ ಬಿದ್ದು ಬಿದ್ದು

(ಚಿತ್ರಸೆಲೆ : professionalstudies.educ.queensu.ca )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: